ಸೋಮವಾರ, ಮೇ 13, 2013


"ಶತಮಾನಂಭವತಿ" .

ನಿನ್ನೆ ಕಳೆದ ಒಂದು ಅದ್ಬುತ ಕ್ಷಣ ಅಂದರೆ  ನಮ್ಮ  ೩ಕ(೩ಕೆ )ರ  ನೂರು ಕವಿಗಳ ನೂರು ಕವನ ಸಂಕಲನ ಬಿಡುಗಡೆ ಸಮಾರಂಭ ...... "ಶತಮಾನಂಭವತಿ" .
ಸಂಜೆ ೪.೩೦ ಕ್ಕೆ ಮನೆ ಇಂದ ಹೊರಟು ಕಾಲ್ನಡಿಗೆಯಲ್ಲಿ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ತಲುಪುವಷ್ಟರಲಿ ಸಂಜೆ ೫.೦೦ ಗಂಟೆ ಆಗಿತು. ಅವಾಗ ನನ್ನ ಕಣ್ಣಿಗೆ ಕಂಡವರು ಶ್ರೀಕಾಂತ್ ಮಂಜುನಾಥ್ ಸಾರ್


ಅವರ ಕ್ಯಾಮರ ಕಣ್ಣಲಿ ಕಣ್ಣಿಗೆ ಕಟ್ಟುವಂತ ಅತ್ಯದ್ಬುತ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದ ದೃಶ್ಯ ಎದುರಿಗೆ ಬಂದು ನಿಂತಿತು. ಅವರನ್ನು ಮಾತನಾಡಿಸಿದ ನಂತರ ಕಂಡವರು


ಪ್ರದೀಪ್ ರಾವ್ ಅವರಿಗೆ ಒಂದು ಹಾಯ್ ಹೇಳಿದೆ.

ಮತ್ತೆ ಎದುರಿಗೆ ಬಂದವರೇ ಕ್ಯಾಮರದ ಕಣ್ಣಿನ ಕಲೆಗಾರರು ಬಾಲು ಸಾರ್ ಅವರ ಒಂದು ಸ್ಮೈಲ್ ಮನನೋಹಕವಾಗಿತ್ತು

ನಂತರ ಕಂಡವರು ಶಿವೂ ಸಾರ್ ಅವರ ಕ್ಯಾಮರ... ಮಳೆರಾಯ ಬಂದು ಕಾಡಿದರೆ.... ಎಂಬ ಭಯದಲ್ಲಿ ಕ್ಯಾಮರದ ಮೇಲೆ ಛತ್ರಿ ಹಾಕಿಕೊಂಡು ತೆಗೆಯುತ್ತಿದ ಚಿತ್ರಗಳು ಹಾಗೆ ಕ್ಯಾಮರದಲ್ಲಿ ಅಚ್ಚಾಗುತ್ತಿದ್ದವು....
ಹಾಗೆ ರೂಂ ನಿಂದ ಹೊರಬಂದ ಬೂಪ ... ಸತೀಶ್ ನಾಯಕ್ ಅವರನು ನೋಡಿ ಒಂದು ಕ್ಷಣ ಏನಿದು..???? ಸತೀಶನನ್ನು ನೋಡಿ ಮದುಮಗನು ಅಂದು ಕೊಂಡೆ ..........ಅಗಾ ಅವರೇ ಮದುಮಗನಂತೆ ಬಂದು ನನ್ನನು ಹಾಗೆ ಅಪ್ಪಿಕೊಂಡರು ....ಆ ಅಪ್ಪುಗೆಗೆ ಮನಸ್ಸಿನಲ್ಲಿ ಸಂತೋಷದ ಹರುಷ ಉಕ್ಕಿತು .
ಮತ್ತೆ ಕಂಡವರು ಅರುಣ್ ಶೃಂಗೇರಿ (ಉಪ್ಪಿ) .......

....ಅವರಂತೂ ಸತೀಶ ನಾಯಕ್ ಗಿಂತ ಒಂದು ಕೈ ಮೇಲೆ ಅನೋ ಹಾಗೆ ವಿಜ್ರುಮುಸುತ್ತಿದ್ದರು .ಅವಗಿಗೊಂದು ಪುಟ್ಟ ಅಪ್ಪುಗೆ...ನಂತರ ಕಣ್ಣಿಗೆ ಬಿದ್ದವರು ನವೀನ ಕೆ.ಅರಹಳ್ಳಿ ಮತ್ತು ಗೋಪಿನಾಥ್ yil ಅವರಿಗೊಂದು ಹಾಯ್ ಹೇಳಿ ಹಾಗೆ ಮುಂದೆ ಹೋದಾಗ ಕಂಡದ್ದು ...

ಸುಂದರ ಸೊಬಗಿನ ಅಪರೂಪದ ರೂಪಕ ನಮ್ಮ ಅಕ್ಕರೆಯ ಅಕ್ಕ ರೂಪಕ್ಕ....ಅವರ ಪ್ರೀತಿಯ ಸ್ವಾಗತ ಮನಸ್ಸಿನಲ್ಲಿ ಮರೆಯಲಾದ ಒಂದು ಅಚ್ಚಳಿ....ಅವರೊಂದಿಗೆ ಮಾತಾಡಿ ಹಾಗೆ ನನ್ನ ಕ್ಯಾಮರ ಕಣ್ಣು ರೂಮಿನತ್ತ.......ಕ್ಲಿಕ್ ಮಾಡಿದ್ದೂ ನನ್ನ ಪ್ರೀತಿಯ ಅಣ್ಣ.... ಅಣ್ಣ ಬಾಂಡ್ ಅಶೋಕಣ್ಣ ಅವರಿಗೊಂದು ಪ್ರೀತಿಯ ಅಪ್ಪುಗೆ ತಂಪಾದ ಗಾಳಿಯಂತೆ ಅಪ್ಪಳಿಸಿತು.... 

ಅವರೊಂದಿಗೆ ಹೊರ ಬಂದಾಗ ಕಂಡದು ನನ್ನ ನೆಚ್ಚಿನ ಗೆಳೆಯ ಸತೀಶ್ ಬಿ ಕನ್ನಡಿಗ ಮತ್ತೆ ಅವನೊಂದಿಗೆ ಬಂದ ಅರುಣ್ ಕುಮಾರ್ ಅವರ ಮೊದಲ ಪರಿಚಯ ತುಂಬ ಅಚ್ಚರಿಯಾಗಿತ್ಗಿತು. ಅಲ್ಲೇ ಪಕ್ಕದಲಿ ನಿಂತಿದ್ದ ಗೆಳತಿ ಮಂಜುಳಾ ರವೀಶ್ ಅವರಿಗೂ ಹಾಯ್   ಹೇಳುತಿರುವಾಗ...


 ಬಿರುಗಾಳಿಯಂತೆ ವೇಗವಾಗಿ ಬಂದು ನಿಂತವನೆ ಪ್ರವೀಣ್ ಭಟ್ ಸಂಪ. ಅವನಿಗೊಂದು ದೊಡ್ಡ ಅಪ್ಪುಗೆ.
 ಹಾಗೆ  ನನ್ನ ಕಣ್ಣು ಅಕ್ಕ ಪಕ್ಕ ಅಡಿಸಿದಾಗ ಅಲಲ್ಲಿ ಗುಂಪು ಗುಂಪುಪಾಗಿ ಮಾತಾಡುತಿದ ಹೊಸ ಮುಖಗಳ ಹಳೆ ಪ್ರತಿಬೆಗಳು ಹಳೆ ಪ್ರತಿಬೆಗಳ ಹೊಸ ಮುಖಗಳು ಅವರನು ನೋಡಿ ಮನಸ್ಸಿನಲ್ಲಿ ಉಲ್ಲಾಸ ಹಾಗೆ ಹರಡಿತು...ಸಮಯ ಕಳೆದಂತೆ ಸ್ನೇಹಿರತ ಆಗಮನ ಹಾಗೆ ಮೆಲ್ಲನೆ ಬಂದವನು  ನನ್ನ ಆತ್ಮಿಯ ಗೆಳೆಯ ಜಗ್ಗು ಜಾನೆ ಮನ್ನನ್ನು .( ನೋಡಿ ತುಂಬ ಕುತೂಹಲವಹಿತು ಏಕೆಂದರೆ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ ಕೆಲಸದ ಮೇಲೆ ಮುಂಬೈ ಗೆ ಹೋಗ್ಬೇಕು ಅಂತ ಇದ್ದವ ಸರಿಯಾದ ಸಮಯಕ್ಕೆ ಬಂದನಲ್ಲ ಅಂತ) ನೋಡಿ  ತುಂಬಾ ಸಂತೋಷವಾಯಿತು. 

ಮತ್ತೆ ತಿರುಗಿ ನೋಡಿದರೆ ಸರಿಯಾದ ಸಮಯಕ್ಕೆ ಹಾಜರ್ ಆಗುವ  ನಮ್ಮ ಮುದ್ದಿನ (ಮಾವ ) ಮಹೇಶಣ್ಣ ಮತ್ತೆ ಅತ್ತಿಗೆ ಬಂದದ್ದು  ಕುಶಿಯಲಿ ನಿಂತಾಗ ಕಣ್ಣಿಗೆ ರಂಜಿಸಿದು ನಮ್ಮ ನಾಯಿ ಕಳ್ಳಿ ಸಹನಾ ಅವಳಿಗೋದು ಹಾಯ್ ಹೇಳಿ  ಹಾಗೆ ಎಲ್ಲರೊಂದಿಗೆ ಮಾತುಕತೆ ಆಡುತ್ತ ನಿಂತಿದಾಗ ಪಕ್ಕದಲ್ಲಿ ಎಲ್ಲರನ್ನು  ಕರೆಯುತ್ತಿದಾ   ಚಹಾ , ಕಾಫಿ , ಕೇಸರಿ ಬಾತ್  ಮತ್ತೆ ಉಪ್ಪಿಟ್ಟು ನಮ್ಮನು ಅಯಸ್ಕಾಂತದ ಹಾಗೆ ಸೆಳೆಯುತ್ತಿತು. ಎಲ್ಲರು ಸ್ವಲ್ಪ ಸ್ವಲ್ಪ ಅಂತಾನೆ  ೨ ರೌಂಡ್ ಬರಿಸುತಿದ್ರು ....ಇದನು ಕಂಡ ಕ್ಯಾಮರ ಮ್ಯಾನ್ ಗಳು ತಮ್ಮ ತಮ್ಮ ಕ್ಯಾಮರ ಕಣ್ಣಲಿ  ಕ್ಲಿಕ್ ಕ್ಲಿಕ್ ಮಾಡುತಿದ್ರು

 ..ಹಾಗ ನ್ಯೂಸ್ ಚಾನಲ್ ನವರು ಬಂದು ರಿಪೋರ್ಟ್ ಮಾಡುತಿದ್ರು .

ಅ ಸಮಯಕ್ಕೆ ಬಂದವರೇ ನಮ್ಮ ಮುಖ್ಯ ಅತಿಧಿ... ಕನ್ನಡ ಸಿನಿಮ ಸಾಹಿತ್ಯಲೋಕದ  ನಾದಬ್ರಹ್ಮ ಹಂಸಲೇಖ ಸರ್ ..ಅವರನು ನೋಡಿದು ಮೊದಲಾದರೂ ಅವರ ಪರಿಚಯ ಹಳೆಯದು. ಅವರು ನಮ್ಮೆಲರಿಗೂ ಹಾಯ್ ಹೇಳಿ ಹೊಳಗೆ ಹೋದರು ನಾವು ಸಹ ಸಭಾಂಗಣದ ಹೋಳಒಕ್ಕಿದೆವು ...ಹಗಲೇ ಸಭಾಂಗಣದ  ಹೌಸ್ ಫುಲ್ ಆಗಿತ್ತು ನಾವು ಹಿಂದೆ ಹೋಗಿ ಕುಳಿತೆವು. ನಮ್ಮ ಎದುರು ಕುಳಿತಿದ್ದ ಮಹಾನ್ ಲೇಖಕರದ ಗೋಪಿನಾಥ್ ಬೋರಾಗಿ ಸರ್, ಮಣಿಕಾಂತ್ ಸರ್ , ಬದ್ರಿನಾಥ್ ಪಲ್ಲವಿ ಸರ್ ,ಅವರಲಿಲಿ ಅವರದೇ ಮಾತುಗಳು ಕೇಳಿ ಬರುತಿದವು.
ಅಲ್ಲಲಿ ಸಣ್ಣಗೆ  ಗುಸು... ಗುಸು ...ಪಿಸು ...ಪಿಸು ಮಾತು ಕೇಳಿಬರುತ್ತಿತು.....ಎಲ್ಲರ ಮುಖದಲಿ ಕಳೆ ಎದ್ದು ಕನಿಸುತ್ತಿತು. 


ಹೊಸ ಮುಖ ಹಳೆ ಪರಿಚಯ ಎಲ್ಲೋ ನೋಡಿವುವ ಅನುಭವ ... ಎಲ್ಲ ಫೇಸ್ಬುಕ್ ಮತ್ತೆ ಬ್ಲಾಗ್ ನಲ್ಲಿ  ಪರಿಚಯ ಇದ್ದವರು. ಕಣ್ಣ ಮುಂದೆ ಕಂಡಾಗ ಮುಖದ ಭಾವನೆ ಬೇರೆಯೇ.....ಆಶ್ಚರ್ಯ ಅವಲೋಕನ ....ಓ.. ನೀವೇ ಅಲ್ವ...????  ಸಕತ್ ಆಗಿ  ಬರಿತ್ತಿರ ಅಂತ  ತಮ್ಮ ತಮ್ಮ ಪರಿಚಯ ತಾವೇ ಮಾಡಿ ಕೊಡುತ್ತಿದರು. ಅವರನು ನೋಡಿ ಬಾವುಕನಾಗಿ ನೋಡುವಾಗ  ಬಾಗಿಲ ಬಳಿ ಕಂಡವರೇ ಅನು ಅಕ್ಕ ಅವರಿಗೋದು ಹಾಯ್ ...ಅವರಿಂದೆ ಕಂಡವರು ಅನುಮಪ , ಕುಮಾರ್ ಸರ್ , ಈಶ್ವರ್ ಸರ್, ಅವರೊಂದಿಗೆ  ಹೊಸ ಪರಿಚಯದ ಹಳೆ ಮುಖಗಳು. ಹಾಗೆಯೇ  ಕುಳಿತು ಅತ್ತ ಇತ್ತ ನೋಡುತ ಪಕ್ಕದಲ್ಲಿ ಬಂದು ಕುಳಿತವರೇ  
 ನಮ್ಮ ಅಕ್ಕ ಸುನಿತಕ್ಕ ಹೊ ಬಂದ್ರ  ಅಂತ ಅವರಿಗೂ ಹಾಯ್ ಹೇಳಿ ಮಾತಾಡುತ ಇದಾಗ  ಎದುರಿಗೆ ಬಂದವಳೇ ಮಾತಿನ ಮಲ್ಲಿ ನಗು ಮುಖದ ಸುಂದರಿ ರಶ್ಮಿ ಹೆಗ್ಡೆ ಬಂದವಳೇ ನನ್ನ ಹೊಟ್ಟೆಗೆ ಕೊಟ್ಟಳು ಒಂದು ಡಿಶುಂ ಹಾಯ್ ಮಲ್ಲ ಅಂತ ಹಾಯ್ ಹೇಳಿ ಅವಳ ಜಾಗದಲ್ಲಿ ಕುಳಿತು ಬಿಟ್ಟಳು.ಹಾಗ .
. ಪಟ್ ಅಂತ ಅರುಣ್ (ಉಪ್ಪಿ) ಬಂದು ಕಾರ್ಯಕ್ರಮ ಪ್ರಾರಂಭ ಮಾಡಿಯೇ ಬಿಟ್ಟರು.... ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಸ್ವಾಗತ ಬಾಷಣ ,  

ಮುಖ್ಯ ಅತಿಥಿಗಳ ( ಹಂಸಲೇಖ ಸರ್ , ವಸುದೆವೆಂದ್ರ ಸರ್, ಮಂಜುನಾಥ್ ಕೊಳ್ಳೆಗಾಲ ಸರ್,) ವೇದಿಕೆಗೆ ರೂಪಕ್ಕ ಅವರಿದ ಅಹ್ವಾನ, ಮಹೇಶ್ ಸರ್   ಅಶೋಕಣ್ಣ ಸತೀಶ್ ನಾಯಕ್ ಅವರಿಂದ ಅತಿಥಿಗಳ ಪರಿಚಯ, ಅತಿಥಿಗಳು ದೀಪ ಬೆಳಗಿದರು. ಅತಿಥಿಗಳಿಂದ ನಮ್ಮ ೩ಕೆ ಯಾ ನೂರು ಕವಿಗಳ ನೂರು ಕವನ ಸಂಕಲನ 


" ಶತಮಾನಂಭವತಿ" ಲೋಕ್ಕರ್ಪಣೆ ಮಾಡಿದರು.
 ನಂತರ ಅತಿಥಿಗಳ ಭಾಷಣ ತುಂಬ ಸೋಗಸಗಿತು. ಅದರಲು ವಸುದೆವೆಂದ್ರೆ ಸರ್ ಅವರ ಮಾತು ಎಲ್ಲರ ಮನ ಮುಟ್ಟಿತು
ಚಪ್ಪಾಳೆಗಳ ಸುರಿಮಳೆ ...


 


  

ಮತ್ತೆ ಹಂಸಲೇಖ ಮತ್ತು ಮಂಜುನಾಥ್ ಕೊಳ್ಳೆಗಾಲ ಸರ್ ಅವರ ಭಾಷಣ ತುಂಬಾ ಚನ್ನಾಗಿತು. ಹಂಸಲೇಖ ಅವರ ಮತ್ತೊಂದು ನಾಮದೆಯ " ಹಮ್ಲೇ ಸೂಪರ್ಆಗಿದೆ ಅಲ್ವ...

 

.ಅವರ ನಾಮದೆಯ ಹೇಳಿ ಎಲ್ಲರ ಮುಖದಲಿ ನಗು
 ಹಾಗೆ ನನ್ನ  ಆತ್ಮಿಯ ಗೆಳಯ ಮತ್ತು ಗೆಳತಿಯರ ಅನುಪಸ್ತಿತಿ ಕಡುತ್ತಿತು.  ಸಮಯ ೮.೧೫  ಕಾರ್ಯಕ್ರಮ ಮುಗುಯುವ ಸಮಯ ಹೊರಗೆ ೩ಕೆ ಮಳಿಗೆಯಲಿ ಪುಸ್ತಕ ಕೊಳ್ಳುವವರ ಬರಟೆ ತುಂಬಾನೆ 


ಇತು ನಾನು ಒಂದು ಪುಸ್ತಕ ತೆಗೆದು ಕೊಂಡು ಅದರಲ್ಲಿ ಕವಿಗಳ ಅಸ್ತಕ್ಷರ ಮಾಡಿಸಿ ಕೊಂಡು ಹೊರಡಲು ಸಿದ್ದರಾದೆವು.  ಎಲ್ಲರಿಗು ತಮ್ಮ ತಮ್ಮ ಕಾರು , ಬೈಕು , ವಾಕ್, ಅಂತ ಶುಭರಾತ್ರಿ ಹೇಳಿ ಹೊರಟರು. ನಾವು ಸಹ ಎಲ್ಲರಿಗು ಶುಭರಾತ್ರಿ ಹೇಳಿ ಹೊರಟು ಮನೆಗೆ ಬಂದೆವು. 

ನಮ್ಮ ಶಿವೂ ಸರ್ ಕಾರ್ಯಕ್ರಮದಲಿ  ತೆಗೆದಿರುವ ಅದ್ಬುತ ಚಿತ್ರಗಳನ್ನು ನನ್ನ ಈ ಬರವಣಿಗೆಯಲ್ಲಿ ಬಳಸಿದೇನೆ.
 ನನ್ನ ಧನ್ಯವಾದಗಳನು ಅವರಿಗೆ ಅರ್ಪಿಸುತ್ತೆದೇನೆ.


ನಿಮ್ಮ ಪ್ರೀತಿಯ ಗೆಳೆಯ
ಮಲ್ಲೇಶ್ ಸಕಲೇಶಪುರ

4 ಕಾಮೆಂಟ್‌ಗಳು:

 1. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಳೆಯಲ್ಲಿ ಮೀಯುವ ಆಸೆ ಬಹಳಷ್ಟಿದೆ. ಆದರೆ ಗೆಳೆಯ ಪದಗಳಲ್ಲಿ ನೆನೆಸುವ, ಮೀಯುವ ಅವಕಾಶ ನಿಮ್ಮ ಬರಹದಿಂದ ನನಗೆಸಿಕ್ಕಿದೆ . ಒಂದು ಕಾರ್ಯಕ್ರಮದ ಏಕ್ ದಂ ನೇರ ನಿರೂಪಣೆ ಅಂದ್ರೆ ಇದು. ಸೂಪರ್ ಗೆಳೆಯ. ಬರಹಕ್ಕೆ ಬಾಯಿಲ್ಲ ಅಂತಾರೆ... ನಾವೆಲ್ಲಾ ಸರಸ್ವತಿ ಲೋಕದಲ್ಲಿ ಅಂಬೆಗಾಲಿಡುತ್ತಿರುವ ಕಂದಮ್ಮಗಳು. ಕನ್ನಡ ತಾಯಿಗೆ ಆರತಿ ಎಂದರೆ.. ಈ ರೀತಿಯ ಪದಗಳ ಮೆರವಣಿಗೆ ಮಾಡುತ್ತಿದ್ದರೆ ಕನ್ನಡಮ್ಮ ಸರಸ್ವತಮ್ಮ ದಿಲ್ಕುಶ್ !!! ಮುಂದುವರೆಯಲಿ...

  ಪ್ರತ್ಯುತ್ತರಅಳಿಸಿ
 2. ಸರ್,
  ಕಾರ್ಯಕ್ರಮವನ್ನು ಚಿಕ್ಕದಾಗಿ ಚೊಕ್ಕವಾಗಿ ಫೋಟೊಗಳ ಸಹಾಯದಿಂದ ವಿವರಿಸಿದ್ದೀರಿ. ಇದನ್ನೋದಿ ತುಂಬಾ ಖುಷಿಯಾಯ್ತು. ನನ್ನ ವೆಂಡರ್ ಕಣ್ಣು, ಗುಬ್ಬಿ ಎಂಜಲು, ಜಲನಯನ ಪುಸ್ತಕಗಳ ಬಿಡುಗಡೆಯಾದ ಆಗಿನ ಸಂಭ್ರಮದ ನೆನಪು ಮರುಕಳಿಸಿತು. ನೀವು ಇಲ್ಲಿ ಬಳಸಿರುವ ಚಿತ್ರಗಳು ನನ್ನವಲ್ಲ. ಅವೆಲ್ಲ 3K ಬಳಗದವು. ನಾನಿಲ್ಲಿ ನೆಪಮಾತ್ರ. ನನಗೆ ವಹಿಸಿದ ಪುಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಪ್ರಯತ್ನಿಸಿದ್ದೇನೆ ಅಷ್ಟೆ. ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 3. ಮಲ್ಲೇಶ್... ನಡೆದ ಘಟನೆಗಳನ್ನು ಯಥಾವತ್ತಾಗಿ ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ... ಧನ್ಯವಾದಗಳು!

  ಪ್ರತ್ಯುತ್ತರಅಳಿಸಿ