ಮಂಗಳವಾರ, ಜನವರಿ 18, 2011

ನನ್ನ ಪ್ರೀತಿ ಹೇಗಿರಬೇಕು ಗೊತ್ತೆ…!!
ನನ್ನ ಹೃದಯದಲ್ಲಿರುವ ಪ್ರೀತಿಯ
ಹಣತೆ ನಾನಾದರೆ..
ಅದನ್ನು ಬೆಳಗಿಸುವ ಜ್ಯೋತಿ
ಅವಳಾಗಬೇಕು

ಸುಂದರ ಕನಸುಗಳನ್ನ
ಕಾಣುವ ಕಣ್ಣುಗಳು
ನನ್ನದಾದರೆ…
ಆ ಕಣ್ಣೊಳಗೆ ಕೊರೈಸುವ
ಕಾಂತಿ ಅವಳಾಗಬೇಕು …!

ಆಸೆಗಳು ಕೂಡಿರುವ
ಮುದುಡಿದ ಮೊಗ್ಗು
ನಾನಾದರೆ…
ಮೊಗ್ಗು ಅರಳಿಸುವ
ಮುದ್ದು ಗೆಳತಿ
ಅವಳಾಗಬೇಕು

ನೋವೊಳಗೆ ಅಳುವ
ಮುಗ್ಧ ಮಗು
ನಾನಾದರೆ…
ಅಳುವ ಮರೆಸಿ
ಲಾಲಿ ಹಾಡುವ
ತಾಯಿ ಹೃದಯ ಅವಳಾಗಬೇಕು !!!!
ಮಲ್ಲೇಶ್ ಗೌಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ