ಶುಕ್ರವಾರ, ಮೇ 23, 2014

 ಜಿರಳೆ ಮರ್ಡರ್ (  ಕೇಸ್  ಹಾಕಬೇಡಿ ) 

ದಿನ ನೀವು  ಬಸ್ ನಾ  ಸೀಟ್ನಲ್ಲಿ  ಕುಳಿತು  ಹಾಡು ಕೇಳೋದು , ಜೋರಾಗಿ ಮಾತಾಡೋದು, ನಿದ್ದೆ ಮಾಡೋದು , ಬುಕ್ಸ್ ಓದೋದು , ನ್ಯೂಸ್ ಪೇಪರ್ ಓದೋದು  ನೋಡಿರ್ತಿರ .. ಆದ್ರೆ  ಸೀಟ್ ಮೇಲೆ ಕೂತು ಡಾನ್ಸ್ ಮಾಡೋದನ ನೀವು ನೋಡಿದಿರಾ ಇಲ್ಲ ಅನ್ಸುತ್ತೆ.... 
ಇದು ಯಾಕೆ ಹೇಳ್ತಿದೀನಿ ಅಂದ್ರೆ ಇಂದು ಬೆಳಿಗ್ಗೆ  ಆಫೀಸ್ ಗೆ ಬರುವಾಗ ಬಸ್ಸನಲ್ಲಿ ಡಾನ್ಸ್ ಮಾಡಿದೆ.
ufff ....  ಯಾಕೆ ಕೇಳ್ತಿರ ನನ್ನ ಅವಸ್ತೆ ಅವಾಗ....... 
ನಡೆದ ಘಟನೆ...
ಎಂದಿನಂತೆ ಬೆಳಗ್ಗೆ  ೯ ಗಂಟೆಗೆ ರೆಡಿಯಾಗಿ  ಆಫೀಸ್ ಗೆ ಹೊರಟು ಬಸ್ ಅತ್ತಿ ಒಂದು ಸೀಟ್ ಮಾಡ್ಕೊಂಡು ಕುತ್ಕೊಂಡೆ.
ಬ್ಯಾಗ್ ನಿಂದ  ಎಸ್ . ಎಲ್ . ಬೈರಪ್ಪನವರ ವಂಶರುಕ್ಷ ಬುಕ್ ಓದುತ್ತ ಇದ್ದೆ. ತುಂಬ ಇಂಟರೆಸ್ಟಿಂಗ್ ಕಥೆ. ಓದ್ತಾ ಇದ್ರೆ ಏನೋ ಒಂದು ತರಹದ ನಿಜ ಜೀವನದಲ್ಲಿ  ಕಣ್ಣೆದುರಿಗೆ ನಡೆದನಂತ ಘಟನೆಗಳು ಎಂಬಂತೆ ಆ ಕಾದಂಬರಿ (ಒಮ್ಮೆ ಓದಿ ತುಂಬ ಚನ್ನಾಗಿದೆ ) ಬಸ್ಸು ತುಂಬ ರಷು ಇತ್ತು. ನಾನು ಓದುತ್ತ ಓದುತ್ತ ಅದರಲಿ ಮುಳುಗಿ ಹೋಗಿದೆ.   ಅವಾಗ ಬೆನ್ನಿನ ಹಿಂದೆ ಒಂತರ ಮುಲು... ಮುಲು .. ಏನಲು ಶುರವಾಯಿತು. ನಾನು ಇದೇನಪ್ಪ ಅಂತ ಕೈ ಹಾಕಿ ಅದನ್ನು ತೆಗೆಯೋಕೆ ಪ್ರಯತ್ನ ಪಟ್ಟೆ  ಆಗಲಿಲ್ಲ ಸುಮ್ನೆ  ಬುಕ್ ಓದೋಕೆ ಸ್ಟಾರ್ಟ್ ಮಾಡಿದೆ ಅದ್ರು ಸ್ವಲ್ಪ  ಜಾಸ್ತಿಯೇ ಮುಲು  ಮುಳು ಅನ್ನೋಕೆ ಮತ್ತೆ ಪ್ರಾರಂಬಿಸಿತು. ನಂಗೆ ಏನು ಮಾಡಬೇಕು ಅಂತ ತೊಚ್ಚೆಲೇ ಇಲ್ಲ ...  ನನ್  ಕೈ ನ ಹಿಂದೆ ಮುಂದೆ ಮಾಡಿ ಮಾಡಿ ಇನ್ ಶರ್ಟ್  ಮಾಡಿದ ಶರ್ಟ್ ತೆಗೆದೇ  ಮತ್ತೆ  ಬಾಡಿ ನೆ ಶೇಕ್ ಮಾಡೋಕ್ಕೆ ಸ್ಟಾರ್ಟ್ ಆಯಿತು.ಕುತಲೇ  ಕೈ ಬ್ರೇಕ್ ಡಾನ್ಸ್ ಅಡೋತರ ಆಗ್ತಿತ್ತು. ಪಕ್ಕದಲಿ ಕುಳಿತವರು .  
 ಏನ್ ಆಯ್ತಾಪ್ಪ ...?? ಯಾಕ ಮುಲ್ಗುಡ್ತಿದ್ಯ ....???  ಸರಿಯಾಗಿ ಕೂತ್ಕೋ ಅಂದ್ರು
ಸರ್ ಆಗ್ತಿಲ್ಲ ಬೆನ್ನಲ್ಲಿ ಏನೋ ಮುಲು ಮುಲು ಅಂತ ಇದೆ ಅದೇಕೆ ಹೀಗೆ ಅಡ್ತಿದಿನಿ ಇಲ್ಲ ಅಂದ್ರೆ ನಾನ್ಯಾಕೆ  ಮುಲು ಮುಲು ಅನ್ಲಿ ಸರ್ .....
ಹೌದೆ...!!!   ಅದೇನು ಅಂತ  ಸರಿಯಾಗಿ ನೋಡ್ಕೋ  ಅಂದ್ರು
ಬಸ್ಸ ನಲ್ಲಿ ನಿಂತಿದವರಲ್ಲ  ನೋಡಿ ನಗೋಕೆ ಶುರು.... ( ಬೆಕ್ಕಿ ಗೆ ಚಲ್ಲಟ್ಟ ... ಇಲಿಗೆ ಪ್ರಾಣ ಸಂಕಟ ) 
ನಂಗೆ ಒಂದು ತರ  ಆಗ್ತಿತ್ತು ...   ಅದ್ರು ಕೈ ಹಾಕಿ   ತೆಗೆದೇ .....  ನೋಡೇದರೆ ಸಣ್ಣ  ಜಿರಳೆ.... ನನ್ನ ಅಂಗಿಯಲಿ ಸೇರ್ಕೊಂದಿತ್ತು. ನನ್ನ ಕೈ ಹಾಕಿದ ರಬಸಕೆ ಪಾಪ ಅದು  ನನ್ನ ಕೈಯಲ್ಲಿ  ಮರ್ಡರ್ ಆಯಿತು. 
ನಂಗೆ ಆ ಕ್ಷಣ ಏನೇನೊ ಅನ್ಸೋಕ್ಕೆ ಶುರು ಆಯಿತು,   ಆದ್ರೆ ಏನು ಮಾಡೋ ಆಗೇ  ಇಲ್ಲ  ಕೆಲ ಸಮಯ ದೇವ್ರು ಏನೆಲ್ಲಾ ಅಡುಸ್ತನೆ  ಅಂತ ಗೊತ್ತೇ ಆಗೋಲ.......  ನಂಗೆ ಜಿರಳೆ  ಬೆಟ್ಟು ಅವ್ನು ತಮಾಷೆ ನೋಡ್ತಾನೆ...
 ಹ್ಹ ಹ್ಹ ಹ್ಹ ಹ್ಹ .....

ಆಫೀಸ್ ಗೆ ಹೋಗು ಅವಸರದಲಿ ಬಟ್ಟೆ ನ  ಕೊಡವಿ ಅಕೊಳೋದು ಮರಿಬೇಡಿ...ಇಲ್ಲ ಅಂದ್ರೆ ನನ್ ತರ   ಬಸ್ ನಲಿ ಡಾನ್ಸ್ ಮಾಡಬೇಕಾಗುತ್ತೆ.... .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ