ಸೋಮವಾರ, ಡಿಸೆಂಬರ್ 8, 2014


ಅವಳು

ಅಂದು ಸಂಜೆ ೫.೩೦ರ ಸಮಯ.. ಆಫೀಸ್ ಕೆಲಸ ಮುಗಿಸಿ ಅವನು ಮನೆಗೆ ಹೋಗುತ್ತಿದ್ದ..ಮನಸ್ಸಿನಲ್ಲಿ ಅವಳ ನೆನಪು ತುಂಬಾ ಕಾಡುತ್ತಿತ್ತು.. ನಾಲ್ಕು ವರ್ಷಗಳ ಹಳೆ ನೆನಪುಗಳು ದಿನ ಅವನಲ್ಲಿ ಅವಳಾಗಿ ಮೂಡಿ ಒಂದು ಸುಂದರ ನೆನಪುಗಳ ಸರವನ್ನೇ ಅವನ ಮನಸ್ಸಿನಲ್ಲಿ ಕಟ್ಟಿಕೊಂಡಿದ್ದನು.. ಆ ಚಲುವೆ ಸಹ ಸಂಜೆ ೬ ಗಂಟೆಗೆ ಆಫೀಸ್ ಕೆಲಸ ಮುಗಿಸಿ ಮುಂಬೈನ ಕಲಾಭಾದೇವಿ ದೇವಸ್ಥಾನದಿಂದ ದಿನ ನಡೆದುಕೊಂಡು ಹೋಗ್ತಾಳೆ. ಮುಂಬಯಿಯ ಆ ಮಹಾನಗರದಲ್ಲಿ ಅವಳು ಇವನ ಕಣ್ಣಿಗೆ ಸುಂದರ ಮನಮೋಹಕ ಚಲುವೆ ತರ ಪ್ರತಿದಿನ ಕಾಣುತ್ತಾಳೆ.. ಆಫೀಸ್ ನಿಂದ ಸಿಟಿ ರೈಲ್ವೆ ಸ್ಟೇಷನ್ ಗೆ ೫ ಮೈಲು ಆಗುತ್ತೆ.. ಆ ಕಲಾಭಾದೇವಿ ದೇವಸ್ತಾನದ ಪಕ್ಕ ಒಂದು ಸರ್ಕಲ್ ಇದೆ. ಆ ಸರ್ಕಲ್ ನ ಹತ್ತಿರ ಪ್ರತಿದಿನ ಬಸ್ಸು ಹಿಡಿದು ಅವಳು ವಿಟಿ ರೈಲ್ವೆ ಸ್ಟೇಷನ್ ಗೆ ಹೋಗೋದು ಅವನಿಗೆ ಮೊದಲಿನಿಂದಲೂ ಗೊತ್ತಿರುತ್ತೆ.. ಇವನು ಸಹ ಆಫೀಸ್ ಕೆಲಸ ಮುಗಿಸಿ ಹಾಗೆ ಅವಳನ್ನು ಈ ದಿನ ನೋಡುವ ಬಯಕೆಯಲ್ಲಿ ಕಲಾಭಾದೇವಿ ಸರ್ಕಲ್ ಕಡೆ ಹೊರಟ.. ಅವನ ಮನಸ್ಸಿನಲ್ಲಿ ಅವಳ ಹಳೆ ನೆನಪುಗಳ ಹೊಸ ಸರಮಾಲೆ, ಆಗಸದಲಿ ಕಪ್ಪನೆ ಕಾರ್ಮೋಡಗಳ ಸಾಲು ಸಾಲು ಮೆರವಣಿಗೆ.. ಆ ಸಂಜೆಯ ತಿಳಿನೀಲಿ ಅಗಸವನ್ನೆಲ್ಲಾ ನುಂಗಿನುಂಗಿ ಬರುತ್ತಿದ್ದವು ಆ ಕಪ್ಪು ಕಾರ್ಮೋಡಗಳು.. ತಂಪಾದ ಗಾಳಿ ಕಾರ್ಮೋಡಗಳ ಭಯಕ್ಕೆ ತಾವು ಆ ಕಿರಿದಾದ ರಸ್ತೆಗಳಲ್ಲಿ, ಸಂದಿ-ಗೊಂದಿಗಳಲ್ಲಿ ನುಗ್ಗಿ ನುಗ್ಗಿ ಓಡುತಿತ್ತು. ಮಳೆ ಬರುವುದು ಗ್ಯಾರಂಟಿ.. ಅವಳನ್ನು ಈ ದಿನ ನೋಡ್ತಿನೋ ಇಲ್ವೋ.. ನೋಡಲೇಬೇಕು ಅನ್ನೋ ಬಯಕೆ ಅವನಲ್ಲಿ.. ಆ ಮಳೆ ಅಡ್ಡಿ ಅಗುವೊದೋ ಎಂದು ಅನುಮಾನ ಮೂಡುತ್ತಿರುವಾಗ ಮಳೆರಾಯನಿಗೆ ಒಂದು ರಿಕ್ವೆಸ್ಟ್ ಮಾಡಿಕೊಳ್ತಾನೆ. ತಲೆ ಮೇಲೆ ಮಾಡಿ ( ಓ ಮಳೆರಾಯ ಪ್ಲೀಸ್ ಈ ಒಂದು ದಿನ ಮಾತ್ರ ಸ್ವಲ್ಪ ಲೇಟ್ ಆಗಿ ಭೂಮಿಗೆ ಬಂದು ಬಿಡು.. ನನ್ನವಳ ಒಮ್ಮೆ ಕಣ್ತುಂಬ ನೋಡುವ ಬಯಕೆ ಮನದಲಿ ಮೂಡಿದೆ, ದಿನಂಪ್ರತಿ ನೀ ಸ್ವಲ ಸಹಕರಿಸು ಕೈ ಜೋಡಿಸಿ ಬೇಡುವೆನು ನಾ ನಿನಗಿಂದು.) ಅವನ ಈ ಬೇಡಿಕೆಗೆ ಮಳೆರಾಯ ಯಾವುದೇ ಪ್ರತಿಕ್ರಿಯೆ ನೀಡದಂತೆ ಕಾಣಲಿಲ್ಲ. ಇಂದು ಏನಾದರೂ ಸರಿಯೇ ಅವಳ ಮುಖ ನೋಡದೆ ನಾನು ಮನೆಗೆ ಹೋಗಲಾರೆ ಅನ್ನೋ ಹಠ ಅವನಲ್ಲಿ ಭದ್ರವಾದ ಮನೆ ಮಾಡಿತ್ತು. (ಆದರೆ ಅವನ ಮಾತಿಗೆ ಮಳೆರಾಯ 'ಹೋಗೊಲೋ ಹೋಗೋ ..ದಿನಾ ನಿಂದು ಇದೆ ಆಯಿತು' ಎನ್ನುತ ಮಳೆರಾಯ ಮೆಲ್ಲಗೆ ಹೆಜ್ಜೆ ಇಡುತ್ತಾ ಬರುತ್ತಿದ್ದಾನೆ.)

ಅವಳು ಬರೋ ಸಮಯ ಆಯಿತು ನಾನು ಹೋಗಲೇಬೇಕು... ಅವಳ ನೋಡಲೇಬೇಕು ಎನ್ನುವ ಹಠದೊಂದಿಗೆ ಹೆಜ್ಜೆ ಇಡುತ್ತ ಮುಂದೆ ಹೋಗ್ತಾನೆ..ಆಗ ದಾರಿಯಲಿ ಅವನ ಸ್ನೇಹಿತ ಏನೋ ಇವತ್ತು ಈ ಕಡೆ ಹೊರಟೆ ಮನೆಗೆ ಹೋಗೋಲ್ವ?? ಹೋಗ್ಬೇಕು ಇಲ್ಲೇ ಕಲಾಭಾದೇವಿ ದರ್ಶನ ಮಾಡಿ ಆಮೇಲೆ ಹೋಗ್ತಿನಿ ಅಂದ.. ಹೌದ ನಾನು ಬರ್ತೀನಿ ದೇವಸ್ತಾನಕ್ಕೆ ದೇವಿ ದರ್ಶನ ಮಾಡೋಣ ಅಂದ. (ಅಯ್ಯೋ ಇವನು ಎಲ್ಲಿಂದ ತಗ್ಲಾಕ್ಕೊಂಡ ಶಿವ) ಇಲ್ಲ ನನಗೆ ಬೇರೆ ಕೆಲಸ ಇದೆ ಆಮೇಲೆ ಹೋಗ್ತಿನಿ ನನಗೆ ಲೇಟ್ ಆಗುತ್ತೆ ನೀನು ಹೋಗು. ಎನ್ನುತ್ತಾ ಅವನು ಮುಂದೆ ಸಾಗಿಯೇಬಿಟ್ಟ..
ಕಲಾಭಾದೇವಿ ಸರ್ಕಲ್ ಹತ್ತಿರ ಬರುತ್ತಾ ಬರುತ್ತಾ ಅವನ ಮನಸ್ಸಿನಲ್ಲಿ ಏನೋ ಒಂದು ತರ ಪಿಲಿಪಿಲಿ ಅನ್ನಿಸೋಕೆ ಶುರುವಾಯ್ತು..
ನಾನು ಅವಳನ್ನ ಹೀಗೇಕೆ ನೋಡೋಕೆ ಹೋಗ್ತೀನಿ.. ಅವಳು ನನ್ನ ನೋಡಿದ್ರೆ ಏನಂದುಕೊಂಡಾಳು .. ಇವನೇಕೆ ದಿನ ಇಲ್ಲಿ ಬಂದು ನಿಂತಿರುತ್ತಾನೆ? ನನ್ನ ನೋಡೋಕೋ ಎಂಬ ಸಂಶಯ ಬಂದ್ರೆ. ಇಲ್ಲ ಇಲ್ಲ ದಿನ ಅವಳು ಹೋಗುವ ಸಮಯಕ್ಕೆ ನಾನು ಮನೆಗೆ ಹೋಗ್ತಿನಲ್ಲಾ ಏನು ಗೊತ್ತಾಗೊಲ್ಲ. ಸರಿ ಅವಳಿಗೆ ಕಾಣದ ಹಾಗೆ ಯಾವುದಾದರು ಬಿಲ್ಡಿಂಗ್ ನ ಸೈಡ್ ನಲಿ ಅವಿತು ನಿಂತರೆ ಅವಳಿಗೆ ಕಾಣುವುದಿಲ್ಲ ಎನ್ನುತ್ತಾ ಕಲಾಭಾದೇವಿ ಸರ್ಕಲ್ ಬಳಿ ಸರಿಯಾದ ಸಮಯಕೆ ಹಾಜರ್ ಆಗ್ತಾನೆ.
ಆದೆ ಸಮಯಕ್ಕೆ ಸರಿಯಾಗಿ ಮಳೆರಾಯ ಕಪ್ಪನೆ ಕಾರ್ಮೋಡ ಕರಗಿಸುತ್ತಾ ನೀರಾಗಿ ಒಂದೊಂದೇ ತುಂತುರು

, , , , , , , , , , , , , , , , ,, , , , , ,
, ,,,,,,,, , , ,, , , , ,,,,, , , ,, ,
, , , , , , , , , ,, , , , , , , , , , , , ,, , ,
, , , ,, , , , ,, , ,,, , ,, , , , , ,,, , ,,,, ,,,
, , , , , ,,, ,, , , ,,,, , ,, , ,,


ಭೂಮಿತಾಯಿಯ ಮಡಿಲನು ತಂಪಾಗಿಸಲು ಸುರ್ರ್ ........... .... ಎಂದು ಬರುವ ಸದ್ದು ಕೇಳಿ ಅವನು ಒಂದು ಬಿಲ್ಡಿಂಗ್ ಕೆಳಗೆ ನಿಂತು ಹಳೆಯ ನೆನಪುಗಳನ್ನ ಕೆದಕ್ಕುತ್ತಾ ಅವಳ ಬರುವ ದಾರಿಯನ್ನೇ ನೋಡುತಿರುತ್ತಾನೆ..ಮಳೆ ಇನ್ನು ಜೋರಾಗಿ ಸುರಿಯಲು ಶುರುಮಾಡಿದೆ. ಈ ಮಳೆಯಲಿ ಅವಳು ಬರುವಳೋ ಇಲ್ಲವೋ ಒಂದು ತಿಳಿಯದೆ ಅವನು ಅಲ್ಲೇ ಅವಳಿಗಾಗಿ ಕಾಯುತ್ತ ನಿಂತಿದಾನೆ. ಸಮಯ ೬.೩೦ ಆಗ್ತಾ ಬಂತು. ಮಳೆರಾಯ ತನ್ನ ಕಾರ್ಯ ಮುಗಿಸಿ ತನ್ನ ಒಡಲನ್ನು ಹಗುರವಾಗಿಸಿ ಹೋಗಿರುತ್ತಾನೆ. ಆದರೆ ಅವನ ಮನಸ್ಸು ಯಾಕೋ ಭಾರವಾಗಿರುವ ಅನುಭವ.. ಮನಸಲ್ಲಿ ಬರಿ ಅವಳದೇ ಚಿಂತೆಯಲಿ ಅವಳು ಮಳೆ ಕಡಿಮೆ ಅದ ಮೇಲೆ ಬಂದೆ 

ಬರುವಳು ಎಂಬ ಗಾಢವಾದ ನಂಬಿಕೆಯಿಂದ ಅಲ್ಲೇ ಕಾಯುತ ನಿಂತಿದ್ದಾನೆ. ಮಳೆ ಇನ್ನೂ ಕಡಿಮೆಯಾಯಿತು.. ಆಗ ಅವನ ಮನಸ್ಸಿನಲ್ಲಿ ಅವಳು ಈಗ ಬಂದೆ ಬರ್ತಾಳೆ, ಇಲ್ಲೇ ಬಂದು ಬಸ್ ಸ್ಟಾಪ್ ನಲಿ ಬಸ್ಸು ಹತ್ತುತ್ತಾಳೆ ಎಂಬ ನಂಬಿಕೆ ಬಂದು ಅಲ್ಲೇ ಕಾಯುತ್ತಾನೆ.
ಅದೇ ಸಮಯಕ್ಕೆ ತುಂತುರು ಮಳೆಯಲಿ ತಿಳಿಕೆಂಪು ಬಣ್ಣದ ಡ್ರೆಸ್, ತಲೆ ಮೇಲೆ ವ್ಯಾನಿಟಿ ಬ್ಯಾಗು, ರಸ್ತೆಯಲಿ ಹರಿಯುತ್ತುರುವ ನೀರನ್ನು ಜಿಗಿದು ಜಿಗಿದು ದಾಟಿ ಬರುವ ಅವಳ ನಡೆ ಕತ್ತಲೆಯಲ್ಲೂ ಹೊಳೆಯುವ ಕಪ್ಪು ಕಣ್ಣುಗಳು, ಲೇಟ್ ಆಯಿತು ಮನೆಗೆ ಹೋಗುವ ಆತುರ ಎಲ್ಲವನ್ನೂ ಹಾಗೇ ದಿಟ್ಟಿಸಿ ನೋಡುತ್ತ ನಿಂತನು.. ಅವಳು ಅವನ ಸಮೀಪ ಬಂದಷ್ಟು ಅವನ ಮನಸ್ಸಿನ ದುಗುಡ ಮತ್ತಷ್ಟು ಹೆಚ್ಚುತ್ತಾ ಹೋಯಿತು. ಮೂಕಮನಸ್ಸು ಮಗುವಾಯಿತೇ.... ಬದುಕು ಬರಡಾಯಿತೇ... ಅಸೆ ನೀರಲಿ ಕೊಚ್ಚಿ ಹೋಯಿತೇ... ನೋಟ ಮುಪ್ಪಾಯಿತೇ.... ಹೀಗೇಕೆ ನನ್ನ ಮನಸ್ಸು ತಳಮಳಿಸುತಿದೆ..... ಒಂದೂ ಗೊತ್ತಾಗದೆ ನಿಂತಲ್ಲೇ ಮೂಕಪ್ರೇಕ್ಷಕನಾಗಿ ಅವಳನ್ನೇ ನೋಡುತ್ತಿದನು. ಹೃದಯಬೇನೆಯಲ್ಲಿ ಅವಳನ್ನು ದಿಟ್ಟಿಸಿ ದಿಟ್ಟಿಸಿ ನೋಡುತ್ತಿದಂತೆ ಅವಳು ಬಸ್ಸನು ಹತ್ತಿ ಹೊರಟೆ ಹೋದಳು....
ಹೋಗೋದನ್ನೇ ನೋಡುತ ನಿಂತ ಅವನ ಕಣ್ಣು ಆ ಬಸ್ಸಿನ ನಂಬರ್ ಅನ್ನು ಹುಡುಕುತ್ತಿತ್ತು.. ಬಸ್ಸು ಹಾಗೆ ಕಲಾಭಾದೇವಿ ಸರ್ಕಲ್ ನಿಂದ ವಿಟಿ ಕಡೆ ಮರೆಯಾಗುತ್ತಿತ್ತು... ಅವಳನ್ನು ನೋಡಿದ ಅವನ ಮನಸ್ಸಿಗೆ ಸ್ವಲ್ಪ ಸಮಾದಾನವಾಯಿತಾದರೂ ಮನಸ್ಸಿನಲ್ಲಿ ಒಂದು ಗೊಂದಲ ಸೃಷ್ಟಿಯಾಯಿತು..
ಅವಳನ್ನು ನಾನು ಯಾಕೆ ಅಷ್ಟು ಇಷ್ಟಪಟ್ಟೆ...?? ಅವಳನ್ನೇ ಇಷ್ಟಪಡಲು ಕಾರಣವೇನು ..??? ಒಂದು ವರ್ಷದಿಂದ ಅವಳನು ನೋಡುವ ಆತುರ ಹಂಬಲ ನನಗೇಕೆ ..?? ಒಂದು ಸಲವೂ ಅವಳ ಬಳಿ ಮಾತಾಡಿಲ್ಲ. ಅವಳ ಕಣ್ಣಿಗೆ ನಾನು ಎಂದು ಕಾಣಿಸಿಕೊಂಡಿಲ್ಲ .. ಕದ್ದು ಕದ್ದು ನೋಡುವ ಚಟ ನನಗೆ ಎಲ್ಲಿದ ಬಂತು..???? ಒಂದೂ ತಿಳಿಯದೆ ಹಾಗೆ ಯೋಚಿಸುತ್ತ ವಿಟಿ ಕಡೆ ಹೋಗುವ ಬಸ್ ಹಿಡಿದು ಹೊರಟ. ಅವನ ಮನಸ್ಸಿನಲ್ಲಿ ನೂರಾರು ಪ್ರಶ್ನೆ ಹುಟ್ಟೋಕೆ ಶುರುವಾಯಿತು.. ನನಗೆ ಅವಳು ಸಿಗ್ತಾಳ ..?? ಅವಳ ಜೋತೆ ಮಾತಾಡ್ತಿನ ...??? ಅವಳು ನನ್ನ ನೋಡ್ತಾಳ..??. ಮುಂದೆ ಏನಾಗುತ್ತೋ..?? ಇನ್ನು ಏನೇನೋ ಪ್ರಶ್ನೆಗಳು ಅವನ ತಲೆಯಲಿ ಹುಳ ಬಿಡುವ ಹೊತ್ತಿಗೆ ಬಸ್ಸು ವಿಟಿ ಸ್ಟೇಷನ್ ಹತ್ತಿರ ಬಂದಿತ್ತು.. ದಿನ ಹತ್ತೋ ಟ್ರೈನ್ ನಲ್ಲಿ ಮನೆಸೇರಿ ಆಮೇಲೆ ಫ್ರೆಶ್ ಆಗಿ ಊಟ ಮಾಡಿ ಅವಳ ಯೋಚನೆಯಲ್ಲೇ ಮಲಗುತ್ತಾನೆ (ಅವನ ಕನಸಿನಲ್ಲಿ ದಿನ ಕಾಡುವ ಕನಸಿನ ಕನ್ಯೆ ಅವಳೇ ಇರಬಹುದ) ಮುಂದೆ ನೋಡೋಣ ,..........

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ