ಗುರುವಾರ, ಆಗಸ್ಟ್ 20, 2015

ಅವಳ ಕನಸು

ಭಾಗ ೧
೬ ಗಂಟೆ ಅಲಾರಂ ಶಬ್ದ.. ಜಗನ್ ಬೇಗನೆ ಎದ್ದು ದಿನ ತನ್ನ ರೂಂಮಿನಾ ಕಿಟಕಿಯ ಪಕ್ಕ ಬಂದು ನಿಂತು ಹೊರಗೆ ನೋಡುತ್ತಿದ್ದ. ಹಾಗೆ ಇಂದು ಸಹ ನಿದ್ದೆ ಕಣ್ಣಿನಲ್ಲಿ ನೋಡುತ್ತಾ ನಿಂತಿದ್ದ. ಚಳಿಗಾಲದ ಋತು ಹೊರಗೆ ಮಂಜು ಮುಸುಕಿದ ವಾತಾವರಣ ತಂಪಾದ ಗಾಳಿ ಬೀಸುತ್ತಿತ್ತು ಸೂರ್ಯ ಇನ್ನೂ ಉದಯಿಸಿರಲಿಲ್ಲ. ಜಗನ್ ಮನೆಯ ಮಂದೆ ಇರುವ ಶೀಲಾ ಆಂಟಿ ಮನೆಯ ಅಂಗಳದಲ್ಲಿ ಯಾರೋ ಕುಳಿತು ರಂಗೋಲಿ ಬಿಡಿಸುವ ಚಿತ್ರ ಮಬ್ಬಾಗಿ ಕಾಣುತ್ತಿತ್ತು. ಜಗನ್ ತನ್ನ ಕಣ್ಣನ್ನು ಉಜ್ಜಿಕೊಂಡು ಮತ್ತೆ ಮತ್ತೆ ನೋಡುತ್ತಿದ್ದನು. ಇಷ್ಟು ದಿನ ಕಾಣದ ಈ ಸುಂದರ ಚೆಲುವು ಈ ದಿನ ಹೇಗೆ ಕಾಣುತ್ತದೆ. ನನ್ನ ಭ್ರಮೆಯೋ ಏನೋ ಅಂದುಕೊಂಡು ಅವಳನೇ ನೋಡುತ್ತಾ ನಿಂತ. ಹಳದಿ ಬಣ್ಣದ ಸೀರೆಯುಟ್ಟು ರಂಗೋಲಿ ಬಿಡಿಸುತ್ತಿದ್ದ ಆ ಚೆಲುವೆ ನೋಡಲು ತುಂಬ ಲಕ್ಷಣವಾಗಿದ್ದಳು. ಹಣೆಯಲ್ಲಿ ಸಿಂಧೂರ, ಕಿವಿಯಲ್ಲಿ ಹೊಳೆಯುವ ಚಿನ್ನದ ಓಲೆ. ಮೂಗ್ನತ್ತು. ತಲೆಯಲ್ಲಿ ಘಮ್ ಎನ್ನುವ ಮಲ್ಲಿಗೆ ಹೂವು ಇವೆಲ್ಲವೂ ಜಗನ್ ಗೆ ತುಂಬ ಆಕರ್ಷಿಸುತ್ತಿತ್ತು. ಅವಳನ್ನೇ ನೋಡುತ್ತಾ ನಿಂತಿದ್ದ. ಎಂದೂ ಕಾಣದ ಆ ಚಲುವು ಇಂದು ಎಲ್ಲಿಂದ ಉದ್ಭವಿಸಿದೆ. ಅಗ ಅವನಲ್ಲಿ ಒಂದು ಆಲೋಚನೆ ಮೂಡಿತ್ತು. ಆ ಶೀಲಾ ಅಂಟಿ ಅವರ ಮನೆ ಮಂದೆ ಯಾವತ್ತು ರಂಗೋಲಿ ಬಿಡಿಸೋದು ನೋಡಿಯೇ ಇರಲಿಲ್ಲ ಆದ್ರೆ ಇವತ್ತು... ಎಂದು ಯೋಚಿಸುತಿರುವಾಗ ಯಾರೊ ಜಗನ್.. ಜಗನ್.. ಎಂದು ಕೂಗಿದ ಸದ್ದು ಯಾರು...?? ಮತ್ತೆ ಜೋರಾಗಿ ಕೂಗಿದ ಸದ್ದು .. ಯಾರು...?? ಯಾರೋ ತನ್ನನ್ನು ಅಲ್ಲಾಡಿಸಿದಂತೆ ಭಾಸವಾಯಗುತ್ತಿತ್ತು. ಓಮ್ಮೆಲ್ಲೆ ಮೇಲೆದ್ದು ಕುಳಿತು!!!!! ಕಣ್ಣು ಮಿಟುಗಿಸುತ್ತಿದ್ದ ಅವರಮ್ಮ..... ಲೋ ಸೋಮಾರಿ ಜಗ್ಗ ಎದ್ದೇಳೋ ಬೇಗ ಟೈಮ್ ಆಯ್ತು ಆಫೀಸ್ಗೆ.. ಇನ್ನೂ ಮಲ್ಗಿದಾನೇ ಎಂದು ಜಗನ್ನಾ ಎಬ್ಬಿಸಿದರು. ಅವಾಗ ಜಗನ್ ಎದ್ದು ಟೈಮ್ ನೋಡಿದ ೯ ಗಂಟೆ. ಹೋ ಟೈಮ್ ಆಯ್ತು ರಂಗನಾಥ ಬೈತಾರೆ ಅಂತ ಸ್ನಾನಕ್ಕೆ ಹೊರಟ.. ನಾನು ಇಷ್ಟೊತಂನ್ಕ ಕಂಡಿದ್ದು ಕನ್ಸು ಎಂದು ಆಫೀಸ್ಗೆ ರೆಡಿಯಾಗಿ ತಿಂಡಿ ತಿನ್ನದೆ ಬೈಕ್ ಹತ್ತಿ ಹೊರಟ.. ಆದ್ರೆ ಶೀಲಾ ಅಂಟಿ ಮನೆ ಹತ್ತಿರ ಬಂದಾಗ ಅವನಿಗೆ ಒಂದು ಅಶ್ಚರ್ಯ ಕಾದಿತ್ತು.... ಎನ್ ಅದು .....?? ಮುಂದುವರೆಯುವುದು....

ಭಾಗ -೨

ಆಫೀಸ್ ಗೆ ಹೊರಟ ಜಗನ್ ಶೀಲಾ ಅಂಟಿ ಮನೆಯ ಮುಂದೆ ಬಂದು ನಿಂತು ನೋಡಿದ ಅವರ ಮನೆಯ ಮುಂದೆ ರಂಗೋಲಿ ಇರಲೇ ಇಲ್ಲಾ ಅದರೆ ಅವನು ನೋಡಿದ ಹಳದಿ ಬಣ್ಣದ ಸೀರೆಯುಟ್ಟ ಹುಡುಗಿ ಶೀಲಾ ಅಂಟಿ ಮನೆಯ ಬಾಗಿಲಿನಲ್ಲಿ ನಿಂತು ಯಾರೋಂದಿಗೊ ಮಾತನಾಡುವ ದ್ರುಶ್ಯ ಜಗನ್ ಮುಚ್ಚಿದ ಹೆಲ್ಮೆಟ್ ನ ಒಳಗಿನಿಂದ ಕಣ್ಣಿಗೆ ಕಾಣುತ್ತಿತ್ತು. ಅವನಿಗೆ ಆಶ್ಚರ್ಯ ಆದರು ಗೊಂದಲ ಶುರುವಾಯ್ತು. ನಾನು ಕಂಡದ್ದು ಕನಸೋ ಇಲ್ಲಾ ನಿಜವೊ ಅಥವಾ ಯಾವುದೋ ಜನ್ಮದ ರಹಸ್ಯವೊ ಒಂದು ತಿಳಿಯದೆ, ತಲೆಯೋಳಗೆ ಹುಳ ಬಿಟ್ಟಂತಾಗಿ ಬೈಕ್ ಸ್ಟಾಟ್ ೯ ಮಾಡಿ ಆಫೀಸ್ ಕಡೆ ಹೊರಟ. ಜಗನ್ ಪಬ್ಲಿಕ್ ಟಿವಿಯಲ್ಲಿ ಕ್ರೈಂ ರಿಪೋಟ ೯ರ್ ಆಗಿ ಕೆಲಸ ಮಾಡುತ್ತಿದ್ದ. ನೋಡಲು ಸರಸುಂದರಾಂಗ. ೬ ಅಡಿಯ ಉದ್ದ ದೇಹ , ದುಂಡು ಮುಖ ಎಣ್ಣೆ ಗೆಂಪು ಮೈಬಣ್ಣ, ಜಗನ್ ತುಂಟು ಮತ್ತು ಮೃದು ಸ್ವಾಭವದವನು , ಹುಡಗಿಯರಿಗೆ ಚೊಕ್ಲೇಟ್ ಹೀರೊ, ಅವನಿಗೆ ಸಣ್ಣ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಮಕ್ಕಳೊಂದಿಗೆ ಮಗುವಾಗುವ ರೀತಿ ಅವನದು. ಆಫೀಸ್ ತಲುಪಿ ತನ್ನ ಕೆಲಸ ಶುರುಮಾಡಿದ. ಸುಮಾರು ೨, ೩ ಗಂಟೆಯ ಸಮಯ ಆಫೀಸಿನ ಎಲ್ಲಾ ರಿಪೋಟ೯ರ್ ಗಳು ಕಾಫಿ ಕುಡಿಯಲು ಹೊರಟರು. ಜಗನ್ ಕೂಡ ಹೊರಟ ( ಜಗನ್ ಕಾಫಿ ಚಹ ಏನು ಕುಡಿಯೊದಿಲ್ಲ) ಆಫೀಸಿನ ಕ್ಯಾಂಟಿನಲ್ಲಿ ಕುಳಿತು ಮಾತನಾಡುವಾಗ ಬಾಗಿಲ ಬಳಿ ಯಾರೊ ಹಳದಿ ಬಣ್ಣದ ಸೀರೆಯುಟ್ಟು ನಿಂತಿರುವುದು ಜಗನ್ ಗೆ ಕಾಣಿಸುತ್ತದೆ. ಅಲ್ಲೊoದು ಆಶ್ಚರ್ಯ!!!!! ಅವನಿಗೆ ಒಂದು ತರ ಶಾಕ್ ಆಗುತ್ತೆ ಬೆಳಿಗ್ಗೆ ಕನಸಲ್ಲಿ ಶೀಲಾ ಅಂಟಿ ಮನೆ ಹತ್ತಿರ ಮತ್ತೆ ಆಫೀಸ್ ಕ್ಯಾಂಟಿನ್ ನಲ್ಲಿ ಒಂದೆ ತರ ಕಾಣಿಸುವ ಈ ಪರಿ ಅವನಿಗೆ ಮತ್ತಷ್ಟು ಗೊಂದಲದ ಜೊತೆ ಭಯ ಶುರುವಾಯಿತು ಈ ದಿನ ಹೀಗೇಕೆ ಆಗುತ್ತಿದೆ ಒಂದು ತಿಳಿಯದೆ ತಲೆ ಮೇಲೆ ಕೈ ಇಟ್ಟು ಏನೋ ಯೋಚಿಸುತ್ತಿದ್ದ . ಆಗ ಅಲ್ಲಿಗೆ ಅವನ ಸ್ನೇಹಿತ ಬರುತ್ತಾನೆ. ಏನೋ ಜಗನ್ ತಲೆ ಮೇಲೆ ಕೈ ಇಟ್ಟು ಕೂಳಿತ್ತಿದ್ಯಾ ಎನ್ ಅಯ್ತೊ ನಿಂಗೆ ಎನ್ ಇಲ್ಲಾ ಕಣೋ ಸ್ವಲ್ಪ ತಲೆ ನೋವು ಅಷ್ಟೇ( ಬೆಳಗ್ಗೆ ಇಂದ ನಡೆದ ಘಟನೆ ಅವನಿಗೆ ಹೇಳಾಲೋ ಬೇಡವೋ ಎಂದು ಮನಸ್ಸಿನಲ್ಲಿ ಹೇಳಿಕೊಂಡು) ಆ ಸಮಯಕ್ಕೆ ಮ್ಯಾನೇಜರ್ ಇಂದ ಕಾಲ್ ಬರುತ್ತೆ. ಜಗನ್ ನನ್ನ ಕ್ಯಾಬಿನ್ ಗೆ ಬನ್ನಿ ಮ್ಯಾನೇಜರ್ ಕರೆಯುತ್ತಾನೆ. ಜಗನ್ ಅಲ್ಲಿಂದ ಮ್ಯಾನೇಜರ್ ಕ್ಯಾಬಿನ್ ಗೆ ಹೋಗ್ತಾನೆ ನೋಡಿ ಜಗನ್ ಇವಾಗ ಒಂದು ಕಾಲ್ ಬಂದಿತ್ತು ಬಸವನಗುಡಿ ಇಂದ. ಯಾರೊ ಹುಡುಗಿ ಆತ್ಮಹತ್ಯೆ ಮಾಡ್ಕೊಂಡಿದಾಳಂತೆ ಹೋಗಿ ಅದೇನು ರಿಪೋರ್ಟ್ ಮಾಡ್ಕೊಂಡು ಬನ್ನಿ. ಸರಿ ಅಂತ ಜಗನ್ ಹೇಳಿ ಕ್ಯಾಮರಾ ಮ್ಯಾನ್ ಜೊತೆ ಬಸವನಗುಡಿ ಕಡೆ ಹೊರಟ. ಹೋಗುವಾಗ ಅವನಿಗೆ ಒಂದೆ ಆಲೋಚನೆ ಹಳದಿ ಬಣ್ಣದ ಸೀರೆ ಹುಡುಗಿ. ೩೦ ನಿಮಿಷದಲ್ಲಿ ಬಸವನಗುಡಿ ತಲುಪಿದ ಅಲ್ಲಿ ಜಗನ್ ಗೆ ಮತ್ತೊಂದು ಆಶ್ಚರ್ಯ ಕಾದಿತ್ತು ಎನ್ ಅದು.....??? ಮುಂದುವರೆಯುವುದು .......

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ