ಗುರುವಾರ, ಆಗಸ್ಟ್ 20, 2015

ಅವಳ ಕನಸು

ಭಾಗ ೩

ಜಗನ್ ಬಸವನಗುಡಿ ತಲುಪಿದ ........ ಜಗನ್ ಕಾರ್ ಇಳಿದು ವೆಂಕಣ್ಣ ( ಆತ್ಮಹತ್ಯೆ ಮಾಡಿಕೊಂಡಿದ್ದಳೆ ಎಂದು ಹೇಳಿರುವ ಹುಡುಗಿಯ ಅಪ್ಪ) ಅವರ ಮನೆ ಎದುರಿಗೆ ಬಂದು ನಿಂತು ಆ ಕಡೆ ಈ ಕಡೆ ಕಣ್ಣಾಡಿಸಿದ ಅಲ್ಲಿ ಯಾರು ಇರಲೇ ಇಲ್ಲಾ ಅಲ್ಲಿ ಎಲ್ಲವು ಸರ್ವೆ ಸಾಮಾನ್ಯ ಸ್ಥಿತಿಯಲ್ಲಿ ಇದ್ದುದನ್ನು ಕಂಡು ಇದೇನಿದು.....!!!!!! ವೆಂಕಣ್ಣನ ಮನೆಗೆ ಬೀಗ ಹಾಕ್ಕಿತ್ತು ಮನೆಯಲ್ಲಿ ಯಾರು ಇರಲೇ ಇಲ್ಲ ಅಲ್ಲೆ ಪಕ್ಕದಲ್ಲಿ ಇದ್ದ ಕೆಂಪಣ್ಣ ( ವೆಂಕಣ್ಣ ನ ಅಣ್ಣ ಸುಮಾರು ೭೫ ವರ್ಷದ ಅಜ್ಜ) ನ ಜಗನ್ ಕೇಳಿದ...... ತಾತ ಇಲ್ಲಿ ಯಾವುದೊ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಸುದ್ದಿ ಬಂತು ನಿಮಗೇನಾದ್ರು ಗೊತ್ತಾ ಅಂದ....??? ಇಲ್ಲಾ .....??? ಇಲ್ಲಿ ಯಾರು ಇಲ್ಲಾ ಸ್ವಾಮಿ... ಹೌದ ...ಇಲ್ಲೆ ಅಂತ ಹೇಳಿದ್ರಲ್ಲ ಅಜ್ಜ ಇದು ಕೆಂಪಣ್ಣ ಅವರ ಮನೆ ಅಲ್ವಾ ಹೌದು ಅವರ ಮನೆನೇ ಕಣ್ಣಪ್ಪ ......ನಾನು ಅವರ ಅಣ್ಣ ಅವರು ಮನೆಲ್ಲಿ ಇಲ್ಲಾ ಊರಿಗೆ ಹೋಗಿ ೧೦ ದಿನ ಆಯ್ತು ಕಣ್ಣಪ್ಪ ... ಮತ್ತೆ ಹುಡುಗಿ ಆತ್ಮಹತ್ಯೆ ಮಾಡ್ಕೊಂಡಿದ್ದಾಳೇ ಅಂತ ಯಾರು ಫೋನ್ ಮಾಡಿದ್ದು... ಇದು ಯಾವುದೋ ಸುಳ್ಳು ಸುದ್ದಿ ಅಂತ ಮ್ಯಾನೇಜರ್ ಗೆ ಫೋನ್ ಮಾಡಿ ಹೇಳುತ್ತಾನೆ. ಸರ್ ಇಲ್ಲಿ ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ ಯಾರೋ ಸುಳ್ಳು ಸುದ್ದಿ ಕೊಟ್ಟಿದ್ದಾರೆ ಅಂದ. ಸರಿ ನೀವು ಬನಶಂಕರಿಗೆ ಹೋಗಿ ಅಲ್ಲಿ ಮುಖ್ಯಮಂತ್ರಿಗಳದ್ದು ಭಾಷಣ ಇದೆ ಅಂತ ಹೇಳಿದರು. ಸರಿ ಸರ್ ಅಲ್ಲಿಗೆ ಹೋಗಿ ರಿಪೋರ್ಟ್ ತಗೊಂಡು ಬರ್ತೀನಿ ಅಂತ ಹೇಳಿ ಜಗನ್ ಹೊರಟ ..... ಬಸವನಗುಡಿಯಿಂದ ಬನಶಂಕರಿಕಡೆಗೆ ೩೦ ನಿಮಿಷಗಳ ಪ್ರಯಾಣ. ಜಗನ್ ಗೆ ಆ ಹಳದಿ ಬಣ್ಣದ ಸೀರೆಯುಟ್ಟ ಹುಡುಗಿಯ ನೆನಪು ಬಿಟ್ಟರೆ ಬೇರೆ ಯಾವ ಯೋಚನೆ ಅವನ ತಲೆಯಲ್ಲಿ ಇರಲೇ ಇಲ್ಲ. ಈ ದಿನ ಯಾಕೆ ಈ ರೀತಿ .......???? ಯೋಚಿಸುತ್ತಾ ಹಾಗೇ ಕಾರಿನ ಸೀಟಿಗೆ ಒರಗಿ ಕಣ್ಮುಚ್ಚಿದ... ಬೆಳಗ್ಗೆ ಇಂದ ನಡೆಯುತ್ತಿರುವ ಘಟನೆಯ ಬಗ್ಗೆನೇ ಚಿಂತೆ ..... ಅವನ ಮೋಬೈಲ್ ಗೆ ಒಂದು ಕಾಲ್ ಬರುತ್ತೆ ಏನೋ ಮಾತಾಡಿ ಕಾಲ್ ಕಟ್ ಮಾಡ್ತಾನೆ ಆಗ ಕ್ಯಾಮರಾ ಮ್ಯಾನ್ ಜಗನ್ ನ ಕೇಳ್ತಾನೆ... ಯಾಕ್ ಸರ್ ಇವತ್ತು ಮೂಡ್ ಅಪ್ಸೆಟ್ ಆಗಿರೋ ತರ ಕಾಣುತ್ತೆ. ಏನ್ ಆಯ್ತು ಸರ್ ..?? ಏನ್ ಇಲ್ಲಾ ವಿಜಯ್ ತಲೆ ಸ್ವಲ್ಪ ನೋವು ಅಷ್ಟೇ ಅಂದ .. ಬನಶಂಕರಿಯ ಕೆಲಸ ಮುಗಿಸಿ ಜಗನ್ ಆಫೀಸ್ ಗೆ ಬರುತ್ತಾನೆ. ಆಫೀಸ್ ನಲ್ಲಿ ಏಲ್ಲಾ ರಿಪೋರ್ಟ್ ಕೊಟ್ಟು ಮನೆಗೆ ಹೊರಡುತ್ತಾನೆ. ಅಷ್ಟರಲ್ಲಿ ಚೈತ್ರಾಳ ಫೋನ್ ಬರುತ್ತೆ, ಜಗನ್ ನಾನು ಇವಾಗ ಹೋಟೆಲ್ ಕಲ್ಪನಾ ಹತ್ತಿರ ಇದೀನಿ ಬಂದುಬಿಡು ..... ಸರಿ ನಾ ಅಲ್ಲಿಗೆ ಬರ್ತಿನಿ ೩೦ ನಿಮಿಷ .. ಜಗನ್ ಆಫೀಸ್ ನಿಂದ ಕಲ್ಪನಾ ಹೋಟೆಲ್ ಕಡೆ ಹೊರಟ ... ಬೈಕ್ ಅಲ್ಲೆ ಸೈಡ್ ನಲ್ಲಿ ಪಾರ್ಕ್ ಮಾಡಿ ಹೋಟೆಲ್ ಒಳಗೆ ಹೋದ ಅಲ್ಲಿ ಚೈತ್ರಾಳನ್ನು ನೋಡಿ ಅವನಿಗೆ ಆಶ್ಚರ್ಯ ........... ಎನ್ ಅದು ...?? ಮುಂದುವರೆಯುವುದು ........

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ