ಮಂಗಳವಾರ, ಮೇ 20, 2014

ಸ್ನೇಹ ಸಹಾಯ ಸಂಘದ ೭ ನೆ ಇವೆಂಟ್
ಭಾನುವಾರ 12th   ಜನವರಿ  2012  ನಮ್ಮ ಸ್ನೇಹ ಸಹಾಯ ಸಂಘದ  ೭ ನೇ    ಇವೆಂಟ್ ಮಾಡೋಕ್ಕೆ
ನಮ್ಮ ಮಂಡ್ಯ  ಜಿಲ್ಲೆಯ ಮಳವಳ್ಳಿ ತಾಲೋಕಿನ ಕೊಣ್ಣನಕೊಪ್ಪಲು ಗ್ರಾಮದ ಒಂದು ಪುಟ್ಟ ಸರ್ಕಾರಿ ಶಾಲೆಗೆ ಹೊರಡಲು  ಮುಂಜಾನೆಯ ತಣ್ಣನೆಯ  ಚಳಿಯಲ್ಲೂ ಮೈ ಗೆ ಬೆಚ್ಚನೆಯ ಹೊದಿಕೆ  ಹೋದುಕೊಂಡು ನಾನು ಮತ್ತೆ ಸತೀಶ ನಾಯಕ್  ಮಜೆಸ್ಟಿಕ್  ಬಂದು ಸೇರಿ ಕೊಂಡೆವು.
ಮಜೆಸ್ಟಿಕ್  ಪಕ್ಕದಲ್ಲಿ  ಇರುವ ಒಂದು ಸಣ್ಣ ಗಣೇಶನ ದೇವಸ್ತಾನದ ಪಕ್ಕದಲ್ಲಿ  ನಿಂತ  ಹಳೆ  ಮುಖಗಳು  ಹೊಸ ಲೂಕಿಂಗ್ನಲ್ಲಿ  ಮಂಜಿನ ಹನಿಯಂತೆ ಪಳ ಪಳ ಹೊಳೆಯುತ್ತಿದರು.  ಹುಡುಗೀರ್ ಎಲ್ಲ ಹಾಯ್ ಹೌ ಹರ್ ಯು ..ಡಾರ್ಲಿಂಗ್ಸ
 ನಿನ್ನ ನೋಡಿ ತುಂಬ ದಿನ ಆಗಿತ್ತು .  ನೀನು ತುಂಬ ಕ್ಯೂಟ್ ಹಾಗಿ ಕಾಣುತ್ತಿದ್ಯಾ  ಮುಖಕ್ಕೆ ಏನು ಮೆಥ್ಕೊತಿಯೇ  ನಂಗು ಸ್ವಲ್ಪ ಹೇಳೇ ಮಾ  ಅಂತ ಡೋವ್ ಬಿಟ್ಟಿದೆ ಬಿಟ್ಟಿದ್ದು...

ಅದೇ ನಮ್ಮ ಹುಡುಗರು ಬಂದು ಹಾಯ್ ಅಂತ  hug   ಮಾಡಿದೆ ಮಾಡಿದ್ದೂ... ಏನೋ ಎಷ್ಟು ದಪ್ಪ  ಆಗಿದ್ಯಾ    ಎನೋ ತಿನ್ತಿಯೋ  ಹೊಟ್ಟೆಗೆ ನಂಗು ಸ್ವಲ್ಪ whatsapp ನಲ್ಲಿ ಮೆಸೇಜ್  ಹಾಕೋ... ಅಂತ ಹುಡುಗರು ಕೈ ಮೈ ಕುಲ್ಕಿದ್ದೆ ಆಯಿತು ... 
ನಮ್ಮ ರಮ್ಮು ಗೆ ಒಂದು ಕಡೆ ನಿಂತ್ಕೊಂಡು ಎಲ್ಲ ಬಂದ್ರ ಇನ್ನು ಯಾರ್  ಯಾರ್ ಬರಬೇಕು ನೋಡ್ರೋ 
 ಲಿಸ್ಟ್ ಎಲ್ಲಿ ...??
 ಹೇಯ್ ಗುಂಡ ಲಿಸ್ಟ್ ನೋಡಿ ಜನ ಲೆಕ್ಕ ಹಾಕೋ  ಯಾರ ಬಂದಿಲ್ಲ ಕಾಲ್ ಮಾಡು ಟೈಮ್ ಸೆನ್ಸೆ ಇಲ್ಲ ಬೋಡತವು.  ಅಂತ ರಮ್ಮಿ  ಆಕಡೆ ಇಂದ ಈ ಕಡೆ  ರನ್ನಿಂಗ್ ಮಾಡಿದೆ ಮಾಡಿದ್ದು. 
ಆದ್ರೆ ನಾನು  ಅವನ ಮಾತು ಕೇಳದೆ ಈ ಕಡೆ ಹುಡುಗಿರಿಗೇ  ರೆಗುಸ್ತ , ಅವ್ರು ಏನಾದರು ತಿನ್ನೋಕೆ ತಂದಿದರ ಅಂತ ಹುಡುಗರೆಲ್ಲ ಅವರ ಬ್ಯಾಗ್ ಚೀಕಿಂಗ್ ನಲಿ ನಿರತರಗಿದ್ರು... ಅದೇ ಸಮಯಕ್ಕೆ  ಈ ಕಡೆ ಇಂದ  ಬಸ್   ಬಂತ ಇಲ್ವಾ ನೋಡ್ರೋ ಇಲ್ಲ ಅಂದ್ರೆ ಪಿ ಪಿ ಗೆ ಕಾಲ್ ಮಾಡಿ ಹೊಲ್ರೊ ಬಸ್ ಇನ್ನು ಬಂದಿಲ ಅಂತ  ಕೂಗಾಟ  ಅದೇ ಸಮಯಕ್ಕೆ  ಪಿ ಪಿ  ಕಿರಣ್ ಒಂಟೆ ಜಿರಾಫೆ ತರ ಎಂಟ್ರಿ ಕೊಟ್ಟಿದೆ. ಎಲ್ಲ ಹೋಗಿ ಅಪ್ಪಿಕೋ ತಬ್ಬಿಕೋ ಚಳುವನಿನ ಅನ್ಕೊಬೇಕು ಅತರ  ಹಿತ್ತು  ಅಲ್ಲಿ ಸಚುವೆಶನ್ ...
ಹಾಗೆ ಎಲ್ಲ ಮೀಟ್ ಮಾಡ್ತಾ  ಟೈಮ್ ಆಯಿತು ಕಂಡರೂ ಅಂತ ಎಲ್ಲ ಕುಗುತ ಇದ್ರೂ.  ಆ ಕಡೆ ಬಸ್ ಇದೆ   ಹೋಗೋಣ ಅಂತ ಒಂದು ಹಿಂಡು ಹೊರಟಿತು.

ಎಲ್ಲ  ಒಮ್ಮೆ ಬುಸ್ಸನು ನೋಡಿ  ಇದೇನಾ ...????  ಒಂದು ದೊಡ್ಡ ಬಸ್ಸ  ಅಲ್ಲದಿದ್ರೂ  32 ಜನ ಕುಳಿತ್ತು ಕೊಳ್ಳುವ  ವಿಥ್ಔಟ್  ಏರ್ ಕಂಡೀಶನ್ ಬಸ್ಸು ಅಲ್ಲೇ ಪಕ್ಕದಲಿ  ನಿಂತು  ( ಪೋಲಿಸ್ ಮಾಮ  ಬಂದ್ರೆ.... ಬಂದ್ರೆ ,.... ಅಂತ  ಕೂರಲು  ಅಗ್ದಲೆ ನಿಂತ್ಕೊಂಡು  ನಮ್ಮುನೆ ಕೈ ಬೇಸಿ ಬರೋ ಹಡ್ನಡಿಗಳ ಟೈಮ್ ಆಯಿತು. ನಮ್ಮ ಮಾವ ಬರ್ತೇನೆ ಹೋಗಿ ಊರು ಸೇರೋಣ ನಿಮಗೆಲ್ಲ ಟೈಮ್ ಸೆನ್ಸೆ ನೋಡಿ...)   ಅಂದು ಕೊಳೋ  ಟೈಮ್ ಗೆ ಎಲ್ಲ ಬಸ್ಸು ಹೇರಿದೆವು....ಬಸ್ಸ ನಲ್ಲಿ  ಔಟ್ ಸೈಡ್ ಕೂಲ್ ಇನ್ ಕಾಮಿಂಗ್ ಅಂತ ವಿಂಡೋ ದಲಿ ಇಮ್ಯಾಜಿನ್ ನಲಿ ಬರೆದಿದ್ನ ಯಾರು ಗಮನಿಸದೆ ಗ್ಲಸ್ಸ್ ಕ್ಲೋಸ್ ಮಾಡ್ರೋ ಅನುತ್ತ ಎಲ್ಲ ಬಂದ್ರ   ಕೌಂಟ್ ಸ್ಟಾರ್ಟ್ ಆಯಿತು.. .
( ಎಲ್ಲ ಬಂದಿದಾರೆ ನೀನು ರೈಟ್ ಹೇಳಣ್ಣ ಬಸ್ಸು ಬುಸುಗುಟ್ಟಿತು....)
ಬಸ್ಸಿ ನಲಿ ಮೊಜುಮಸ್ತಿ ಶುರುಅಯಿತು. ಅವ್ರಿಗೆ ಇವರು  ಬತ್ತಿ ಇಡೋದು .... ಇವರಿಗೆ ಅವ್ರು ಬತ್ತಿ ಇಡುತ್ತ ಹೊರಟ್ಟಿತ್ತು " ನಮ್ಮ ಸ್ನೇಹ ಸಹಾಯ ಸಂಘದ " ಭವ್ಯ ತೇರು ..   ಅದೇ ನಿಮಿಷದಲ್ಲಿ  ಬಸ್ಸಿನಲ್ಲಿ   ಘಮ ಘಮ ಅಂತ ಇತ್ತು ಸಹನಾ ಮಾಡಿಕೊಂಡು ಬಂದ  ಪುಳಿವಗ್ರೆ ಅನ್ನ.  ನಂಗೆ ಕೊಡ್ರೋ. ನೀನು ತಗೊಳ್ಳು... ಬಾಯಿ ಆ ಮಾಡೂ  ಚನ್ನಗಿದೆಯ....??? ಅಂತ ಕೇಳುತ್ತ  ತಿನ್ನಿಸುತ್ತಾ  ...  ಹಾಗೆ ಹೋಗುವಾಗ ಮತ್ತಷ್ಟು ಸ್ನೇಹಿತರು ಬಸ್ಸು ಹತ್ತಿದರು.. ಕೆಂಗಿರಿಯ ಮೋರಿಯ ಪಕ್ಕ ಅಂತು ಅಲ್ಲ ತುಂಬ ದೂರದಲಿ ಬಸ್ಸು ನಿಲ್ಲಿಸಿ ಹೊಟ್ಟೆ ಗೆ ಬಿಸಿ ಬಿಸಿ ಯಾಗಿ ತುಂಬಿಕೊಳ್ಳಲು ಹೋಟೆಲ್ ಕಡೆ ನಮ್ಮ ಸೈನ್ಯ ಹೊರಟಿತ್ತು. ಹೋಟೆಲ್ ಮ್ಯಾನೇಜರ್ ಅಬ್ಬ ಇವತ್ತು ಒಳ್ಳೆ  ಬಿಸಿನೆಸ್ ಅಂತ ಮನಸ್ಸಲಿ ಸಂತೋಷ ಮಾಡಿಕೊಂಡು  ಸ್ವಾಗತ ಸುಸ್ವಾಗತ.. ಬನ್ನಿ ಆ ಕಡೆ ಲಾಸ್ಟ್ ನಲಿ ಫುಲ್ ಖಾಲಿ ಇದೆ.. ಒಟ್ಟಿಗೆ  ಕುಳಿತು ಕೊಳ್ಳಿ.  ವೈಟರ್ ಬಾ ಇಲ್ಲಿ ಆರ್ಡರ್ ತಗೋ...
ವೈಟರ್ ಆಯಿತು ಸರ್..... ನಿಮ್ಮ ಆರ್ಡರ್ ಹೇಳಿ ಸರ್... ಎಲ್ಲರು ತಮ್ಮ ತಮ್ಮ ಆರ್ಡರ್ ಮಾಡಿದ್ರು... ಏನು ಗೊತ್ತ  ಇಡ್ಲಿ , ವಡೆ , ಮಸಾಲೆ ದೋಸೆ, ಸೆಟ್ ದೋಸೆ, ಪೂರಿ ಸಾಗು, ಚೌ ಚೌ ಬಾತ್ ಹೀಗೆ ಎಲ್ಲ ತಿಂದು ಹೊಟ್ಟೆ  ನ ಪ್ಯಾಕ್ ಮಾಡಿದೆ ಮಾಡಿದ್ದೂ .... ನಾನು ಮತ್ತೆ ಕಿರಣ್ ಎಲ್ಲರ ತಟ್ಟೆಯಲಿ ಕೂಕ್ಟೇಲ್ ತರ ಜಮಹಿಸಿದ್ದೆ ಜಮಹಿಸಿದ್ದು... ಆ ಸಮಯಕ್ಕೆ ಒಂದು ಸರ್ಪ್ರೈಸ ....
ಏನು ಗೊತ್ತ ನಮ್ಮ ಹುಡುಗೀರ್ ಗೆ ಅಣ್ಣ .... ಹುಡುಗರಿಗೆ ಪಂಡಿತರು  ಅವರೇ ನಮ್ಮ ಮುಂಬೈ ಡಾನ್  ಅನ್ನ ಬಾಂಡ್  ಅಶೋಕನನ ಎಂಟ್ರಿ ನೋಡಿ ... ತಿನ್ನೋದು  ಬಿಟ್ಟು  ಎಲ್ಲ ಮತ್ತೆ ಶುರು  ಅಪ್ಪಿಕೋ ತಬ್ಬಿಕೋ ಚಳುವಳಿ.
ಅಣ್ಣ ಬಾಂಡ್  ಅದೆಲ್ಲ ಮುಗಿಸಿ ಬಂದು ತಂಗಿದಿರ ಬಳಿ ತಿಂಡಿ ತಿಂದಿದೆ  ತಿನ್ದಿದು.
ತಿಂಡಿ ತೀರ್ಥ  ಎಲ್ಲ ಮುಗಿಸಿ ಮತ್ತೆ ಪ್ರಯಾಣ ಸಿದ್ದ.  ರಮ್ಮು ಮತ್ತೆ ಎಲ್ಲ ಬಂದ್ರ ನೋಡ್ರೋ ...?? ಬಂದ್ರು ನೀನು ಹೊರಡು ಅಂತ ಎಲ್ಲರ ಕೂಗು... ಅದೇ ಸಮಯಕ್ಕೆ ಹೇಯ್ ಇನ್ನು ಒಬ್ರು ಬಂದಿಲ್ಲ. ಇನ್ನು ಮೂರು ಜನ ಬರಬೇಕು ಅಂತ ಕೂಗಿದರು. ಅಯ್ಯೋ ಅವ್ರು ಬರಲಿ ತಡಿರೋ. ಡ್ರೈವರ್  ನಿಲ್ಸಪ್ಪ ವಸ್ಸಿ ಬಸ್ನ ನಮ್ಮ ಹುಡುರರು ಎಲ್ಲೋ ಸೈಡ್ ನಲಿ ಹೋಗೆ  ಬಿಡ್ತಿದ್ರು ಅಂತ ಕಾಣುತ್ತೆ  ಅದರಿಂದ ಬಿಟ್ಟು ಬಂದಿದಿವಿ ಅವರನ್ನು ಕೊರೆದುಕೊಂಡು ಹೋಗೋಣ ಇಲ್ಲ ಅಂದ್ರೆ ನಮಗೆ ಹಾಕೊಂಡು ರುಬ್ತಾರೆ. ಅಂತ ಬಸ್ಸನ್ನು ನಿಲ್ಲಿಸಿ ಅವರನು ಮತ್ತೆ ಹತ್ತಿಸಿಕೊಂಡು ಹೊರಟೆವು....
.

ನಮ್ಮ ಹಿಂಡಿನ ಮುಖ್ಯ ಸದಸ್ಯ ಎಲ್ಲ ಮಾಮ ಅಂತ ಕರಿಯೋ ಬಿಡದಿ ಸ್ವಾಮಿನ ಏತಕೊಂಡು .. ರೈಟ್ ...ರೈಟ್..

.ಮೈಸೂರ್ ರೋಡ್ ನಲಿ ನಮ್ಮ  ಭವ್ಯ ತೇರು  ಬರುತ್ತಿದೆ ಅಂತ ಸೂರ್ಯ ಇವತ್ತು ಜಾಸ್ತಿನೆ ರೋಶನಿ ಕೊಟ್ಟಿದಾನೆ. ಅದಕ್ಕೇನು ಕಮ್ಮಿ ನಾನು ಅಂತ ಗಾಳಿ ತಪ್ಪಾಗಿ ಬಿಸುತಿದೆ... ಆದರೆ ಸೂರ್ಯನ ಮುಂದೆ ಗಾಳಿ ತನು ಏನು ಇಲ್ಲ ಅಂತ ಸುಮ್ಮನೆ ಹಾಗೆ ಮರದಲ್ಲಿ   ಮರೆಯಾಯಿತು.  ಸೂರ್ಯನ ತಾಪ ಹೆಚ್ಚದಂತೆ ಬಸ್ಸಿ ನ ಕಿಟ್ಟಕಿಗಳು ಹಾಗೆ ಸ್ವಲ್ಪ ಪಕ್ಕಗೆ ಸರಿದವು... ಹೊರಗಿನ ಬಿಸಿಯಾ  ಜೊತೆ ದೋಳಿನೊಂದಿಗೆ ಗಾಳಿ ಬಸ್ಸಿನ ಕಿಟಕಿಯ ಹೊಳಗೆ ರಪ್ಪ ಅಂತ ನುಗ್ಗಿಬಿಟ್ಟಿತು. ಎಲ್ಲರು ಕಿಟಕಿ ಹಾಕ್ರೋ ದೂಳು ಬರ್ತಿದೆ.
ಪಾಪ ಬಸ್ಸು ಕೂಡ ಮಳವಳ್ಳಿ  ರಸ್ತೆಯ  ಮೈ ಮಟಕ್ಕೆ  ಡಾನ್ಸ್ ಮಾಡುತ್ತ ನಮ್ಮನು ಮೇಲಕ್ಕೆ ಕೆಳ್ಳಕ್ಕೆ ಆ ಕಡೆ ಈ ಕಡೆ ತಳ್ಳುತ ... ಏಗೃತ.... ಸಂತೋಷದಿಂದ ನೋಡಿದ್ರ ನಾನು ಕೂಡ ನಿಮಗಿಂತ ಚನ್ನಾಗಿ ಡಾನ್ಸ್ ಮಾಡಬಲ್ಲೆ..
ಹಾಗೆ ಬಸ್ಸಿನ ಡಾನ್ಸ್ ಜೊತೆ ನಾವು ಡಾನ್ಸ್ ಮಾಡುತ್ತ ಸ್ವಲ್ಪ ಲೇಟ್ ಹಾಗಿ  ಕೋಣನಕೊಪಲ್ಲು ಗ್ರಾಮ ತುಲುಪ್ಪಿ ಬಿಟ್ಟೆವು.  ಗ್ರಾಮದ ಮಂದಿ ನಮಗಾಗಿ ಕಾಯುತ್ತ ನೀರು ನಿಂತಿದ್ರು ....
 

ಆ ಊರಿನ ಸಣ್ಣ ಸಣ್ಣ ಹುಡುಗರು , ಹುಡುಗಿಯರು ನಮ್ಮ ಬಸ್ಸು ಬರೋದೆ ನೋಡುತ್ತಾ ... ಬಸ್ಸು ಬಂತು ಅಂತ ಸ್ಕೂಲ್ ನ ಹೊಳಗೆ ಹೋಗಿ ಕೂಗಿ ಹೇಳುತಿದ್ದರು.
ಆ ಸಮಯಕ್ಕೆ  ಊರಿನ ಹಿರಿಯರು ,  ಮೇಷ್ಟು  ಎಲ್ಲ ನಮ್ಮನು ಹೊಳಗೆ ಕರೆದರು. ನಾವೆಲ್ಲ ಬಸ್ಸು ಇಳಿದು. ಸ್ಕೂಲ್ ನ ಮುಂಬಗದಲಿ ನಮಗಾಗಿಯೇ  ಕಾಯುತ್ತ ಬಿಸಿಲಿನಲ್ಲಿ ಹೊಣಗಿದ ಶಾಮಿಯಾನ ನಮ್ಮುನ ಹಾಗೆ ಕೋಪದಿಂದ ನೋಡುತ್ತಾ ಬನ್ನಿ ಹೊಳಗೆ ಬನ್ನಿ ನಿಮಗೆ ಕಾಯುತ್ತ ಇದೀನಿ... ಈ ಸಿಟಿ ನವರಿಗೆ ಟೈಮ್ ಸೆನ್ಸೆ ಅನೋದೆ ಇಲ್ಲ ನೋಡಿ ಅಂತ ಬೈಯೋಕೆ ಸ್ಟಾರ್ಟ್.... ಕುರ್ಚಿಗಳು ಬನ್ನಿ ಬನ್ನಿ ನಮ್ಮ ಮೇಲೆ ಕುಳಿತುಕೊಳ್ಳಿ ನಿಮಗಗೆ ನನ್ನ ದೂರದಿಂದ ತರ್ಸಿದರೆ. ನೀವು  ಆರಾಮ ಹಾಗಿ ಕುಳಿತುಕೊಳ್ಳಿ.  ಅದು ಹೇಳುವುದಕ್ಕೂ ನಾವು ಕುಲಿತುಕೊಳ್ಳುವುದಕ್ಕು ಒಂದೇ ಸಮಯ...... 


ಹಾಗ ಶುರುವಾಯಿತ್ತು, ನಾವು ಬಂದಿದ ಕಾರ್ಯಕ್ರಮಕ್ಕೆ. ಸ್ವಾಗತ ಭಾಷಣ , ಅಧ್ಯಕ್ಷರ ಭಾಷಣ , ಎಲ್ಲರ ಭಾಷಣದ ನಂತರ ನಾವು ಸ್ಕೂಲ್ ಗೆ ದಾನವಾಗಿ  ಕೊಟ್ಟಿದ  ಎಜುಸಾಟ್ ನ  ಉದ್ಘಾಟನೆ ನಮ್ಮ ಮುಂಬೈ ನ ಅಣ್ಣ ಬಾಂಡ್ ಅಶೋಕಣ್ಣ  ಅವರಿಂದ  ಎಲ್ಲಾರ ಜೋರಾದ ಚಪ್ಪಾಳೆ ಯಾ ಸದ್ದು ಮುಗಿಲು ಮುಟ್ಟುವ ಹಾಗೆ ತಟ್ಟಿದರು   ಮಕ್ಕಳಿಗೆ ಸಿಹಿ ಹಂಚಿ  ಅವರೊಂದಿಗೆ ಅಲ್ಲೇ ನಮಗೆ  ಬೇಕದ ಆಂಗಲ್ ನಿಂದ  ಫೋಟೋ ತೆಗುಸ್ಕೊಂಡು.  ನಂತರ ಊಟಕ್ಕೆಸಿದ್ದರಗಿದೆವು. 
ನಮ್ಮ ಹೊಟ್ಟೆ ಹಾಗಲೆ ಟೈಮ್ ಆಯಿತು ಊಟ ಹಕುಸ್ರೊ ಅಂತ  ಬಡ್ಕೊತ ಇತ್ತು. ಸರಿ ಎಲ್ಲ ಊಟಕೆ ಬನ್ನಿ ಅಂತ ಎಲ್ಲರನ್ನು ಸ್ಕೂಲ್ ನ ರೂಂ ನಲ್ಲಿ  ಕೂರಿಸಿ ಊಟ ಬಡಿಸಿದರು..  ಊಟಕೆ ಏನು ಗೊತ್ತ .... ಮುದ್ದೆ ಊಟ ಅವರೇಕಾಳು  ಗೊಜ್ಜು , ಅನ್ನ,  ಸಾರು , ಪಯಸ , ಅಪ್ಪಳ , ಉಪ್ಪಿನಕಾಯಿ, ಹೀಗೆ  ಮ್ರುಷ್ಟನ್ನ್ನ  ಭೋಜನ ನಮ್ಮಗಾಗಿ ತಯಾರಿ ಮಾಡಿದ್ದರು.  ಎಷ್ಟು  ರುಚಿ ಇತ್ತು  ಆದ್ರೆ ಎಲ್ಲ ಎರಡು ಎರಡು ಸರಿ ಮುದ್ದೆ  ತರಿಸಿಕೊಂಡು ತಿಂದಿದ್ದೆ ತಿಂದಿದ್ದು ... ಬಾಯಿ ಚಪ್ಪರಿಸುವಷ್ಟು.  ತಿನ್ನುವಾಗ ಕೂಡ ಫೋಟೋ  ತೆಗ್ದಿದೆ ತೆಗ್ಡಿದು.... 

ಊಟವಾದ  ನಂತರ ಎಲ್ಲ ತಮ್ಮ ತಮ್ಮ ಹೊಟ್ಟೆ ಮುತ್ತಿಕೊಂಡು ಹ ಹ ಸೂಪರ್ ಊಟ ಆಂಟಿ ಒಳ್ಳೆ  ಬಿಗೃಟ  ಮಾಡಿದಹಾಗೆ ಆಯಿತು.  ( ಅನುಟಿ ನಾಚಿಕೊಂಡು thank  you  ಅಂದ್ರು ) ನಿಮಗೆ ತುಂಬ ಧನ್ಯವಾದಗಳು.
ಆಗಲೇ ಮಧ್ಯಾನ  ೨. ೩೦ ಸಮಯ ಮನೆಗೆ ಊರಿನ ಎಲ್ಲಾ ಸದಸ್ಯರಿಗೂ  ನಮಿಸುತ್ತಾ ನಾವು ಹೊರಡುತ್ತೆ ಅಂತ ಹೇಳಿ ಎಲ್ಲ ಸ್ನೇಹಿತರು  ನಮಸ್ಕರಿಸಿ ಹೊರಟವು. ಕೆಲ ಸ್ನೇಹಿತರು ತಮ್ಮ ತಮ್ಮ  ಐರವಾತ ಗಾಡಿಯಲ್ಲಿ ಮನೆಗೆ ತೆರಲ್ಲಿದರು. ನಾವು ಬಂದ್ದಿದ್ದ ಬಸ್ಸು   ಬುಸುಗುಡುತ ಬನ್ರೋ ಟೈಮ್ ಆಗುತ್ತೆ  ಬೆಂಗಳೂರು ಹೋಗ್ಬೇಕು  ನಂಗೆ ಮದ್ಯರಾತ್ರಿ  ಇನೋದು ಟ್ರಿಪ್ ಇದೆ ಅಂತ ಅದರ ಮನಸ್ಸಿನಲ್ಲಿ ಅಂದುಕೊಳ್ಳುತಿತ್ತು.  ನಾವು ಬಸ್ಸನ್ನೇರಿ ಮಕ್ಕಳಿಗೆ ಟಾಟಾ ಟಾಟಾ ಬೈ ಮಡಿ ಹೊರಟೆವು. 
 ಇನ್ನು ಟೈಮ್ ಇದೆ ಅಲ್ವ ಇಲ್ಲೇ ಅತ್ತಿರದಲಿ ಭರಚುಕ್ಕಿ ವಾಟರ್ ಫಾಲ್ಸ್ ಇದೆ ನೋಡ್ಕೊಂಡು ಹೋಗೋಣ ಏನು ಹೇಳ್ತಿರ ಎಲ್ಲ .... ಎಲ್ಲರು ಹಾಗೆ ಅಗಾಲಿ ನೋಡ್ಕೊಂಡು ಹೊಗೊಣ ... ( ನಮ್ಮ ಹುಡುಗರು ಮೊದ್ಲೇ ಈ ಪ್ಲಾನ್ ಮಾಡಿದ್ರು)   uff  ಬಸ್ಸ  ಮತ್ತೆ ಬುಸುಗುಟ್ಟುತ .......  ಡ್ರೈವರ್ ಗೆ ಹೇಳಿ ನಾವು ಆ ದಾರಿಲ್ಲಿ ಹೊರಟೆವು 
           ಭಾರಚಿಕ್ಕಿ ಫಾಲ್ಸ್ ಬಂದ  ತಕ್ಷಣ ಎಲ್ಲ ಸ್ನೇಹಿತರು ಮತ್ತೆ ಸ್ನೇಹಿತೆಯರು  ಬಸ್ಸ ಇಳಿದು ಒಂದೇ ಓಟ 
ಹುಡುಗರು ಮೊದೆಲೇ ಪ್ಲಾನ್ ನಂತೆ ಬಟ್ಟೆ  ತಂದಿದ್ರು . ಎಲ್ಲ ಹುಡುಗರು ನೀರಿನಲಿ ದುಮಿಕಿದ್ದೆ ದುಮಿಕ್ಕಿದು  ಹುಡುಗಿಯರು ಸಹ  ಹುಡುಗರಿಗಿಂತ  ಕಮ್ಮಿ ಏನು ಇಲ್ಲ ಅವ್ರು ಕೂಡ ನೀರಲಿ ಆಟ ಆಡಿದೆ ಆಡಿದ್ದು .... ಸಮಯ ಕಳೆದದ್ದೇ  ಗೊತಗಲಿಲ್ಲ. ಆಗಲೇ ೬. ಗಂಟೆ ಆಗಿತ್ತು  ಸರಿ ಎಲ್ಲ  ಹೊರಡಲು ಸಿದ್ದರಾಗಿ ಎಂದು ಒಂದು ಕೂಗು ಕಡೆ ಇಂದ ಕೇಳಿಸಿತು ಸರಿ ನಾವೆಲ್ಲ ಬೆಂಗಳೂರು ಹೊರಡಲು ಸಿದ್ದರಾದೆವು

ಬಸ್ಸು ನಾವು ಬರುವುದನೆ ಎದುರು ನೋಡುತ್ತಿತು ಬನ್ನಿ ಬನ್ನಿ  ನಿಂಗೆ  ಇದೆ ಇವಾಗ ....... 
ನಾವು ನೀರಿನಲಿ ಆಟವಾಡಿ ತುಂಬ ಸುಸ್ತಾಗಿತ್ತು ಬಂದು ತಮ್ಮ ತಮ್ಮ ಸಿಟ್ಟಿನಲಿ ಕುಳಿತು ಸ್ವಲ ನೆದ್ರೆಗೆ ಹೋದರು . ಬಸ್ಸು  ತಮ್ಮ ಪಾಡಿಗೆ ಹಾಡು ಹೇಳುತ್ತಾ   ಬೆಂಗಳೂರಿನತ ಪ್ರಯಾಣ ಬೆಳೆಸಿತು..... 

ಮಲ್ಲೇಶ ಸಕಲೇಶಪುರ 

1 ಕಾಮೆಂಟ್‌: